15ರಿಂದ ಕಲ್ಲೊಳಿಯಲ್ಲಿ ನವರಾತ್ರಿ ಉತ್ಸವ

12..8
ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ರಾವಸಾಹೇಬ ಬೆಳಕೂಡ, ನಾರಾಯಣ ಪತ್ತಾರ, ಸುರೇಶ ಬಡಿಗೇರ, ಶೀತಲ ಅಥಣಿ, ರಾಮಪ್ಪ ಬೆಳಕೂಡ ಇತರರು ಬಿಡುಗಡೆಗೊಳಿಸಿದರು.
Published on

ಮೂಡಲಗಿ: ತಾಲೂಕಿನ ಕಲ್ಲೊಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ 40ನೇ ವರ್ಷದ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ದೇವಿ ಪುರಾಣ ಮತ್ತು ಪ್ರವಚನ ಅ. 15ರಿಂದ 24ರ ವರೆಗೆ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಜರುಗಲಿದೆ ಎಂದು ನವರಾತ್ರಿ ಉತ್ಸವ ಸ್ವಾಗತ ಸಮಿತಿ ಅಧ್ಯಕ್ಷ ರಾವಸಾಹೇಬ ನಿಂ.ಬೆಳಕೂಡ ತಿಳಿಸಿದರು.

ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಮಂಗಳವಾರ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಅ.15ರಂದು ಬೆಳಗ್ಗೆ ದೇವಿ ಅಭಿಷೇಕ, ಯಜ್ಞ , ಹೋಮ, ಹವನ, ಗಣಹೋಮ ಕಾರ್ಯಕ್ರಮ, ಸಂಜೆ 4ಕ್ಕೆ ದೇವಿಯ ನೂತನ ಮೂರ್ತಿ ಭವ್ಯ ಮೆರವಣಿಗೆ ಕುಂಭ ಮೇಳ, ಮುತ್ತೈದೆಯರಿಂದ ಆರತಿ ಸೇವೆ ಹಾಗೂ ವಿವಿಧ ವಾದ್ಯ ಮೇಳದೊಂದಿಗೆ ಜರುಗಲಿದೆ. ಸಂಜೆ 6ಕ್ಕೆ ಗರ್ಭಗುಡಿಯಲ್ಲಿ ಘಟಸ್ಥಾಪನೆ, ದೇವಸ್ಥಾನದ ಜೀರ್ಣೋದ್ಧಾರ ಲೋಕಾರ್ಪಣೆ ನಂತರ ಉದ್ಘಾಟನೆ ಸಮಾರಂಭವಿದೆ ಎಂದು ತಿಳಿಸಿದರು.

ಭಗವಂತ ಪತ್ತಾರ ಮಾತನಾಡಿ, ಉದ್ಘಾಟನೆ ಸಮಾರಂಭದಲ್ಲಿ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ, ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಸ್ವಾಗತ ಸಮಿತಿ ಅಧ್ಯಕ್ಷ ರಾವಸಾಹೇಬ ಬೆಳಕೂಡ ಭಾಗವಹಿಸುವರು.

ಪ್ರತಿ ದಿನ ರಾತ್ರಿ 7ಕ್ಕೆ ಕಲ್ಲೊಳಿಯ ಸಕಲ ಭಜನಾ ಮಂಡಳಿಗಳು ಭಾಗವಹಿಸುವವು. 40ನೇ ವರ್ಷದ ಪ್ರಯುಕ್ತ ಲೋಕ ಕಲ್ಯಾಣಕ್ಕಾಗಿ ದೇವಿಯ ಮೂರ್ತಿಗೆ 5001 ಮುತ್ತೈದೆಯರಿಂದ ಕುಂಕುಮಾರ್ಚನೆ ಕಾರ್ಯಕ್ರಮ 9 ದಿನ ನಡೆಯುವುದು. ಅ.19ರಂದು ಗಂಗಾರತಿ, ಅ.23ರಂದು ನವದುರ್ಗಿಯರ ಉಡಿ ತುಂಬುವುದು. ದೇವಿ ಮೂರ್ತಿ ಮೆರವಣಿಗೆ, ಮಹಾಪ್ರಸಾದವಿದೆ. ಅ.24ರಂದು ಕಲ್ಲೊಳಿ ಹನುಮಂತ ದೇವರು, ಮಹಾಲಕ್ಷ್ಮೀ ದೇವಿ ಪಲ್ಲಕ್ಕಿಗಳು ಮೆರವಣಿಗೆಯೊಂದಿಗೆ ತೆರಳಿ ಬನ್ನಿ ಮುರಿಯುವ ಕಾರ್ಯಕ್ರಮ ಜರುಗುವುದು ಎಂದು ಹೇಳಿದರು.

ನಾರಾಯಣ ಪತ್ತಾರ, ಸುರೇಶ ಬಡಿಗೇರ, ಶೀತಲ ಅಥಣಿ, ರಾಮಪ್ಪ ಬೆಳಕೂಡ, ಅಜೀತ ಚಿಕ್ಕೋಡಿ, ಶಿವಾನಂದ ಹೆಬ್ಬಾಳ, ಈರಣ್ಣ ಮುನ್ನೋಳಿಮಠ, ಸಿದ್ದು ಮಾಯನ್ನವರ, ಅಜಿತ ಮಾಯನ್ನವರ, ಮಾಯಪ್ಪ ಮಾಯನ್ನವರ, ಬುದ್ದಪ್ಪ ಮಾಯನ್ನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net