

ಧಾರವಾಡ: ಸುಮಾರು 200 ಮಿಲಿಯನ್ ವರ್ಷಗಳ ಹಿಂದೆ ಭೂಮಿಗೆ ಬಂದ ಪರಿಸರ ಆರೋಗ್ಯ ಸೂಚಕಗಳಾದ ಕಪ್ಪೆಗಳ ಬಗ್ಗೆ ಮನುಷ್ಯ ತಿಳಿದುಕೊಳ್ಳುವುದು, ತನ್ನ ಭವಿಷ್ಯದ ಪೀಳಿಗೆಯ ಹಿತದೃಷ್ಟಿಯಿಂದ ಒಳ್ಳೆಯದು. ಕಪ್ಪೆಗಳು ಉಭಯವಾಸಿಗಳಲ್ಲ ಉಭಯ ಜೀವಿಗಳು ಎಂದು ಖ್ಯಾತ ಪ್ರಾಣಿಶಾಸಜ್ಞ ಮತ್ತು ಸಂಶೋಧಕ, ಡಾ. ಕೆ.ವಿ. ಗುರುರಾಜ ಹೇಳಿದರು.
ನಗರದ ಇನ್‌ಸ್ಟಿಟ್ಯೂಷನ್ ಆ್ ಇಂಜಿನಿಯರ್ಸ್‌ನ ಸರ್ ಎಂ. ವಿಶ್ವೇಶ್ವಸ್ವರಯ್ಯ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಪರಿಸರ ಮೂಲತತ್ವ ವಿಚಾರ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಉಭಯಜೀವಿಗಳ ಸಂರಕ್ಷಣೆಯಲ್ಲಿ ನಾಗರಿಕ ವಿಜ್ಞಾನಿಗಳ ಪಾತ್ರ’ ವಿ ಕುರಿತು ಅವರು ಮಾತನಾಡಿದರು.
ಕಪ್ಪೆಗಳು ಆಹಾರ ಸರಪಳಿಯ ಪ್ರಮುಖ ಕೊಂಡಿ. ಜಲಮೂಲ ಮತ್ತು ಹತ್ತಿರದ ತರೀಭೂಮಿಯ ಆರೋಗ್ಯ ಅವುಗಳ ಬದುಕನ್ನು ಮತ್ತು ಭವಿಷ್ಯವನ್ನು ನಿರ್ಧರಿಸುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನೇಚರ್ ರಿಸರ್ಚ್ ಸೆಂಟರ್ ಕಾರ್ಯಾಧ್ಯಕ್ಷ ಪಂಚಾಕ್ಷರಿ ಹಿರೇಮಠ ಮಾತನಾಡಿ, ಹಳ್ಳಿಗೇರಿಯ ನೇಚರ್ ಸ್ಟ್ ಇಕೋ ವಿಲೇಜ್ ಪಾರ್ಕ್‌ನಲ್ಲಿ ಕಪ್ಪೆಗಳ ಉದ್ಯಾನ ಮತ್ತು ೆಲೋಶಿಪ್ ನೀಡಲು ಯೋಜಿಸಲಾಗಿದೆ. ನಾಗರಿಕ ವಿಜ್ಞಾನಿಗಳು ಕ್ಷೇತ್ರಕಾರ್ಯ ಕೈಗೊಳ್ಳಬಹುದು ಎಂದರು.
ನೇಚರ್ ರಿಸರ್ಚ್ ಸೆಂಟರ್ ಯೋಜನಾ ವಿಭಾಗದ ಮುಖ್ಯಸ್ಥ ಹರ್ಷವರ್ಧನ ಶೀಲವಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಸರಸ್ನೇಹಿ ಮೂರ್ತಿಗಳ ಕಲಾವಿದ ಮಂಜುನಾಥ ಹಿರೇಮಠ ಪರಿಚಯಿಸಿದರು. ಪರಿಸರವಾದಿ ಅನಿಲ ಅಳ್ಳೊಳ್ಳಿ ನಿರೂಪಿಸಿದರು. ಪಕ್ಷಿ ತಜ್ಞ ಆರ್.ಜಿ. ತಿಮ್ಮಾಪೂರ ವಂದಿಸಿದರು.
* ಕಪ್ಪೆಗಳ ಸಮೀಕ್ಷೆ: ಶನಿವಾರ ರಾತ್ರಿ 9.30ರಿಂದ 12.30ರವರೆಗೆ ನಗರದ ಕರ್ನಾಟಕ ವಿಶ್ವವಿದ್ಯಾಲಯ ಆವರಣದ ಗಾಂಧಿ ಭವನ, ಸಸ್ಯೋದ್ಯಾನ, ಶಿ.ಶಿ. ಬಸವನಾಳ ಗ್ರಂಥಾಲಯ ಹಾಗೂ ಕೌಸಾಳಿ ವ್ಯವಹಾರ ಅಧ್ಯಯನ ಸಂಸ್ಥೆಯ ಹಳೆಯ ಕಟ್ಟಡದ ಆವರಣದಲ್ಲಿ ಡಾ. ಕೆ.ವಿ. ಗುರುರಾಜ ಹಾಗೂ ಡಾ. ಧೀರಜ್ ವೀರನಗೌಡರ ಸಾರಥ್ಯದಲ್ಲಿ ಕಪ್ಪೆಗಳ ವೀಕ್ಷಣೆ, ಸಮೀಕ್ಷೆ ಮತ್ತು ದಾಖಲೀಕರಣ ಕ್ಷೇತ್ರಕಾರ್ಯ ನಡೆಸಲಾಯಿತು. ಬೋನೈಡೇ, ಡೈಕ್ರೋಗ್ಲಾಸಿಡೇ, ಮೈಕ್ರೋಹೈಲಾ, ರ‌್ಯಾನಿಡೇ, ರ‌್ಯಾಕೋೋರಿಡೇ ಹಾಗೂ ಮೈಕ್ರೋಹೈಲಿಡೇ ಹೀಗೆ 6 ಪ್ರಜಾತಿಯ 12 ಪ್ರಬೇಧಗಳನ್ನು ಗುರುತಿಸಿ ದಾಖಲಿಸಲಾಯಿತು