

ಬೈಲಹೊಂಗಲ: ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಮೊದಲನೇ ವಿಜಯ ಸಾಧಿಸಿದ ನಂತರ ಎರಡನೇ ಬಾರಿ ಯುದ್ಧದಲ್ಲಿ ಗೆಲುವು ಕಂಡಿದ್ದರೆ ದೇಶದ ಚಿತ್ರಣವೇ ಬದಲಾಗುತ್ತಿತ್ತು. ಸ್ವಾರ್ಥಿಗಳ ಕುತಂತ್ರದಿಂದ ಚನ್ನಮ್ಮ ಪರಾಭವಗೊಂಡಳು. ಇಂತಹ ಸ್ವಾರ್ಥಿಗಳಿಂದಲೇ ದೇಶದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಆರ್ಎಸ್ಎಸ್ ಬೆಳಗಾವಿ ವಿಭಾಗದ ಕಾರ್ಯವಾಹ ರಾಮಚಂದ್ರ ಏಡಕೆ ಹೇಳಿದರು.
ಪಟ್ಟಣದಲ್ಲಿ ವಿಜಯದಶಮಿ ಉತ್ಸವ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂದ ಗಣವೇಷಧಾರಿಗಳಿಂದ ಭಾನುವಾರ ಹಮ್ಮಿಕೊಂಡಿದ್ದ ಪಥ ಸಂಚಲನ, ಬೌದ್ಧಿಕ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಜಾತಿ, ಮತ, ಪಂಥ ಮರೆತು ಸೌಹಾರ್ದಯುತವಾಗಿ ಬದುಕು ಸಾಗಿಸಬೇಕು ಎನ್ನುವುದು ಆರ್ಎಸ್ಎಸ್ ಮೂಲ ಉದ್ದೇಶ ಎಂದರು. ಸಂವಿಧಾನಕ್ಕೆ ಗೌರವ ಕೊಡಬೇಕು. ಪ್ರಜಾಪ್ರಭುತ್ವ ಉಳಿಯಬೇಕು. ದೇಶದ ಅಳಿವು, ಉಳಿವು ಸಂವಿಧಾನದಲ್ಲಿ ಅಡಗಿದೆ. ಮಾತೃಭೂಮಿಗೆ ದ್ರೋಹ ಬಗೆದವರನ್ನು ಎಂದು ನಂಬಬಾರದು ಎಂದರು. ಪೈಲಟ್ ಅಯ ಪಾಟೀಲ ಮಾತನಾಡಿ, ಬೆಲಹೊಂಗಲದಲ್ಲಿ ಹುಟ್ಟಿದ್ದು ನಮ್ಮ ಪೂರ್ವಜನ್ಮದ ಪುಣ್ಯ. ಆರ್ಎಸ್ಎಸ್ ಸಂಟನೆಯು ಅನೇಕ ಮಹನೀಯರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ ಎಂದು ತಿಳಿಸಿದರು.
ಆಕರ್ಷಕ ಪಥಸಂಚಲನ: ವೀರರಾಣಿ ಕಿತ್ತೂರು ಚನ್ನಮ್ಮನ ಮುಖ್ಯದ್ವಾರದಿಂದ ಆರಂಭಗೊಂಡ ಪಥಸಂಚಲನ ಸಂಗೊಳ್ಳಿ ರಾಯಣ್ಣ ವತ್ತ, ಪ್ರಮುಖ ಬಜಾರ ರಸ್ತ್ತೆ, ಜವಳಿ ಕೂಟ, ಗೊಂಬಿ ಗುಡಿ, ಬೆಲ್ಲದಕೂಟ, ಉಪ್ಪಿನಕೂಟ, ಹೊಸೂರ ಗಲ್ಲಿ, ಇಂಚಲ ಗಲ್ಲಿ ಮಾರುತಿ ದೇವಸ್ಥಾನ, ಇಂಚಲ ಕ್ರಾಸ್, ದೇವಸ್ಥಾನ, ದೀಪಾ ಹೋಟೆಲ್ ಮಾರ್ಗವಾಗಿ ಸಂಚರಿಸಿ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮೆದಾನದಲ್ಲಿ ಸಮಾವೇಶಗೊಂಡಿತು.