ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡದು ಸ್ನೇಹ

lxr 3 VARSHIKOSTAVA
Published on

ಲಕ್ಷ್ಮೇಶ್ವರ: ಜಗತ್ತಿನಲ್ಲಿ ಎಲ್ಲಕ್ಕಿಂತ ಸ್ನೇಹ ದೊಡ್ಡದು. ಕೃಷ್ಣ-ಸುಧಾಮನ ಅಪ್ಪಟ ಸ್ನೇಹ ವಿಶ್ವಕ್ಕೆ ಮಾದರಿಯಾಗಿದೆ. ಕಷ್ಟ-ಸುಖದಲ್ಲಿ ಭಾಗಿಯಾಗುವವರೇ ನಿಜವಾದ ಸ್ನೇಹಿತರು ಎಂದು ಬಳಗದ ಸದಸ್ಯ ಹಾಗೂ ಧಾರವಾಡ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಎಲ್.ಟಿ. ನಾಯಕ ಹೇಳಿದರು.

ಪಟ್ಟಣದ ಎಪಿಎಂಸಿ ವ್ಯಾಪಾರಸ್ಥರ ಸಂಘದಲ್ಲಿ ಭಾನುವಾರ ಆಯೋಜಿಸಿದ್ದ ಪುರಸಭೆಯ ಉಮಾ ವಿದ್ಯಾಲಯ ಪ್ರೌಢ ಶಾಲೆಯ 1984-85ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಗೆಳೆಯರ ಬಳಗದ 5ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

ಉಪನ್ಯಾಸಕ ಮಂಜುನಾಥ ಹೊಳ್ಳಿಯವರಮಠ ಮಾತನಾಡಿ, ಉತ್ತಮ ಸ್ನೇಹಿತರು ಸಿಕ್ಕರೆ ಬದುಕು ಸ್ವಾರಸ್ಯಕರವಾಗುತ್ತದೆ. ಪ್ರತಿದಿನ ಸ್ನೇಹಿತರೊಡನೆ ಒಡನಾಟ ಇಟ್ಟುಕೊಂಡು ಅವರೊಂದಿಗೆ ಕಷ್ಟ, ಸುಖ ಹಂಚಿಕೊಳ್ಳಬೇಕು. ಅಂದಾಗ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳಿಂದ ಹೊರ ಬರಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಳಗದ ಅಧ್ಯಕ್ಷ ನಾಗರಾಜ ಹಣಗಿ ಮಾತನಾಡಿದರು. ಮಹಾಬಳೇಶ್ವರ ಮೆಡ್ಲೇರಿ, ರುದ್ರಗೌಡ ಪಾಟೀಲ, ಬಳಗದ ಸದಸ್ಯರಾದ ಶಿವಶಂಕರ ಬಿಂದಕಟ್ಟಿ, ಚಂದ್ರಶೇಖರ ಸಂಕಣ್ಣವರ, ಮಹೇಶ ಕರೆಕಲ್ಲ ಹಾಗೂ ಸುಮಾ ಚೋಟಗಲ್ಲ ಮಾತನಾಡಿದರು. ಬಿ.ಎಂ. ಕೆರೂರ, ಮಧುಸೂದನ ದೇಶಪಾಂಡೆ, ಪಿ.ಎಸ್. ಬಾಳಿಹಳ್ಳಿಮಠ, ಎಲ್.ಎನ್. ನಂದೆಣ್ಣವರ, ಮೀನಾ ಹಿರೇಮಠ, ಸೋಮಣ್ಣ ಲಮಾಣಿ, ಇತರರಿದ್ದರು.

ಕೆ.ಎಸ್. ಬಾಳೇಶ್ವರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಹೆಬ್ಬಾಳ, ಬಿ.ಎಂ. ಕುಂಬಾರ, ಚಂದ್ರಶೇಖರ ಚಟ್ಲಿ, ಸುರೇಶ ಚೋಟಗಲ್, ಚಂದ್ರಶೇಖರ ವಡಕಣ್ಣವರ ಕಾರ್ಯಕ್ರಮ ನಿರ್ವಹಿಸಿದರು. ಉಮಾ ವಿದ್ಯಾಲಯ ಪ್ರೌಢ ಶಾಲೆಯಲ್ಲಿ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸರಿತಾ ಕನವಳ್ಳಿ, ಕುಮಾರಿ ಅಂಗಡಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ವೆಂಕಟೇಶ ಪಾಟೀಲ, ಅಕ್ಷಯ ಭಜಂತ್ರಿ ತಬಲಾ ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net