

ಪುತ್ತೂರು ಗ್ರಾಮಾಂತರ: ಪಾಣಾಜೆ ಸುಬೋಧ ಪ್ರೌಢಶಾಲೆಯ 1996-97ನೇ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ ಕಲಿತ ವಿದ್ಯಾರ್ಥಿಗಳ ಸ್ನೇಹಮಿಲನ ‘ಮರಳಿ ಶಾಲೆಗೆ ನೆನಪುಗಳ ಜತೆಗೆ’ ಕಾರ್ಯಕ್ರಮ, ಗುರುಗಳಿಗೆ ಗೌರವಾರ್ಪಣೆ, ಅಗಲಿದ ಗುರುಗಳಿಗೆ ಶ್ರದ್ಧಾಂಜಲಿ ಹಾಗೂ ದೇಣಿಗೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಪಾಣಾಜೆ ವಿದ್ಯಾವರ್ಧಕ ಸಂಘ ಅಧ್ಯಕ್ಷ ಉಪೇಂದ್ರ ಬಲ್ಯಾಯ ದೇವಸ್ಯ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕ ಮಹಾಬಲೇಶ್ವರ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲೆಯ ಅಭಿವೃದ್ಧಿಗಾಗಿ 56 ಸಾವಿರ ರೂ. ದೇಣಿಗೆ ಹಸ್ತಾಂತರಿಸಲಾಯಿತು. ಸುಜಯ್, ರಾಜೇಶ್, ಸವಿತಾ ಶೆಟ್ಟಿ ಮತ್ತು ಹರೀಶ್, ಹಾಲಿ ಮುಖ್ಯ ಶಿಕ್ಷಕಿ ನಿರ್ಮಲಾ ಕೆ. ಹಾಗೂ ಪುರಂದರ ಎಂ.ಜಿ. ಅನಿಸಿಕೆ ವ್ಯಕ್ತಪಡಿಸಿದರು. ಬಿ.ಬಿ ಕ್ರಿಯೇಷನ್ಸ್ನ ಪ್ರದೀಪ್ ಪಾಣಾಜೆ ಮತ್ತು ಮೋಹನ್ ಪಾಣಾಜೆ ಸಹರಿಸಿದರು.
ಅನುರಾಧಾ, ವಿಶಾಲಾಕ್ಷಿ ಮತ್ತು ರಾಧಾ ಕುಮಾರಿ ಪ್ರಾರ್ಥಿಸಿದರು. ಸವಿತಾ ಶೆಟ್ಟಿ ನಿರೂಪಿಸಿದರು.
ಗುರುಗಳಿಗೆ ಗೌರವಾರ್ಪಣೆ
ಗುರುಗಳಾದ ಪಿಲಿಂಗಲ್ಲು ಕೃಷ್ಣ ಭಟ್, ಮೊಳಕ್ಕಾಲು ಶ್ರೀಕೃಷ್ಣ ಭಟ್, ಸುಬ್ರಹ್ಮಣ್ಯ ಶಾಸ್ತ್ರಿ, ಶ್ರೀಪತಿ ಭಟ್, ಪುರಂದರ ಎಂ.ಜಿ. ಮಾತ್ರವಲ್ಲದೆ ಪಾಣಾಜೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಪೇಂದ್ರ ಬಲ್ಯಾಯ, ಶಾಲಾ ಸಂಚಾಲಕ ಮಹಾಬಲೇಶ್ವರ ಭಟ್ ಹಾಗೂ ನಿರ್ಮಲಾ ಕೆ., ಶಿಕ್ಷಕರಾದ ಲಕ್ಷ್ಮೀಶ, ಸದಾಶಿವ ಎಸ್.ವಿ. ಮತ್ತು ಜನಿಯ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಅಗಲಿದ ಗುರುಗಳಾದ ಪ್ರಸಾದ್ ಖಂಡೇರಿ, ವಿ.ಜಿ.ಭಟ್ ಹಾಗೂ ಅಗಲಿದ ಸಹಪಾಠಿಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯಕ್ರಮದ ರೂವಾರಿ ಹರೀಶ್ ನೆಲ್ಲಿತ್ತಿಮಾರು ಅವರನ್ನು ಸನ್ಮಾನಿಸಲಾಯಿತು.