ರಸ್ತೆ ಅಪಘಾತದಲ್ಲಿ ಗೆಳೆಯರ ಸಾವು

bike accident 1
Published on

ಹುಬ್ಬಳ್ಳಿ: ಧಾರವಾಡದಲ್ಲಿ ಅಜ್ಜಿಯ ತಿಥಿ ಮುಗಿಸಿ ಹಿಂತಿರುಗುವ ವೇಳೆ ರಸ್ತೆ ಅಪಘಾತದಲ್ಲಿ ಬೈಕ್ ಮೇಲಿದ್ದ ಇಬ್ಬರು ಗೆಳೆಯರು ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.

ಧಾರವಾಡಕ್ಕೆ ತೆರಳಿದ್ದ ಸುಜಿತ್ ಹಾಗೂ ವಿಕಾಸ ವಾಪಸ್ ಹುಬ್ಬಳ್ಳಿಗೆ ಬರುವಾಗ ವಿದ್ಯಾನಗರ ಬಳಿ ರೋಡ್ ಹಂಪ್ಸ್‌ನಿಂದ ಜಂಪಾಗಿ ಕಬ್ಬಿಣದ ಗ್ರಿಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net