ಕುಶಾಲನಗರದಲ್ಲಿ ಸೌಹಾರ್ದ ಜಾಥಾ

16Kush01
ಕುಶಾಲನಗರದ ಕಾರ್ಯಪ್ಪ ವೃತ್ತದಲ್ಲಿ ದಾರುಲ್ ಉಲೂಂ ಮದರಸ ವಿದ್ಯಾರ್ಥಿಗಳ ದಫ್ ಪ್ರದರ್ಶನ ಗಮನ ಸೆಳೆಯಿತು.
Published on

ಕುಶಾಲನಗರ : ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ 1499ನೇ ವರ್ಷದ ಜನ್ಮ ದಿನ ಅಂಗವಾಗಿ ಸೋಮವಾರ ಇಲ್ಲಿನ ಮುಸ್ಲಿಮರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೌಹಾರ್ದ ಜಾಥಾ ನಡೆಸಿದರು.
ಈ ಸಂದರ್ಭ ಶಾಂತಿ ಮತ್ತು ಸೌಹಾರ್ದತೆಯ ಘೋಷಣೆಗಳನ್ನು ಕೂಗುವ ಮೂಲಕ ಸಹೋದರತೆ ಹಾಗೂ ಸಾಮರಸ್ಯದ ಸಂಕೇತ ಸಾರಿದರು. ದಾರುಲ್ ಉಲೂಂ ಮದರಸ ವಿದ್ಯಾರ್ಥಿಗಳಿಂದ ವಿವಿಧ ಬಗೆಯ ದಫ್ ಪ್ರದರ್ಶಿಸಲಾಯಿತು.
ಮೆರವಣಿಗೆಯು ದಾರುಲ್ ಮದರಸದಿಂದ ಪ್ರಾರಂಭವಾಗಿ ಕಾರ್ಯಪ್ಪ ವೃತ್ತದ ಮೂಲಕ ಹಾದುಹೋಗಿ, ದಂಡಿನ್ಪೇಟೆಗೆ ತೆರಳಿ ನಂತರ ದಾರುಲ್ ಉಲೂಂ ಮದರಸಕ್ಕೆ ಹಿಂದಿರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net