

ರಾಣೆಬೆನ್ನೂರ: ಪತಿ, ಪತ್ನಿ ಸಾವು ಕಂಡು ದಂಪತಿ ಒಂದೇ ಬಾರಿಗೆ ಸಾವು ಕಂಡ ಪ್ರಕರಣ ಸಾಮಾನ್ಯ. ಆದರೆ, ಸ್ನೇಹಿತನ ಆತ್ಮಹತ್ಯೆಯಿಂದ ಮನನೊಂದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡ ಅಪರೂಪದ ಘಟನೆ ತಾಲೂಕಿನ ಕೂಸಗೂರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ವಿಜಯಗೌಡ ಮಲ್ಲನಗೌಡ ಮೂಕನಗೌಡ್ರ (19) ಆತ್ಮಹತ್ಯೆ ಮಾಡಿಕೊಂಡ ಯುವಕ.
ಈತನ ಬಾಲ್ಯ ಸ್ನೇಹಿತ ಗಣೇಶ ಮೆಣಸಿನಹಾಳ ಕಳೆದ ವಾರ ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದನು. ಇದರಿಂದ ಮನನೊಂದಿದ್ದ ವಿಜಯಗೌಡ ತನ್ನ ಸ್ನೇಹಿತನನ್ನು ಬಿಟ್ಟಿರಲಾರದೆ ಜಮೀನಿನ ಕಣದಲ್ಲಿದ್ದ ತಗಡಿನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.