ಹೆದ್ದಾರಿ ಟೋಲ್ ನಲ್ಲಿ ಇಂಧನ ತುಂಬಿದ ಟ್ಯಾಂಕರ್ ಸ್ಫೋಟ

20250522_001030.jpg
Published on

ಬೆಳಗಾವಿ : ಬೆಂಗಳೂರು- ಪುಣೆ ರಾಷ್ಟ್ರೀಯ ಹೆದ್ದಾರಿ ಕೋಗನೊಳ್ಳಿ ಟೋಲ್ ಪ್ಲಾಜಾದಲ್ಲಿ ಬುಧವಾರ ತಡರಾತ್ರಿ ಬೆಂಕಿ ಅವಘಡ‌ ಸಂಭವಿಸಿದ್ದು ಇಂದನ ತುಂಬಿದ ಟ್ಯಾಂಕ್ ಸ್ಪೋಟಗೊಂಡಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ನಿಪ್ಪಾಣಿ ಪಟ್ಟಣದ ಹೊರ ವಲಯದಲ್ಲಿರುವ ಕೊಗನೊಳ್ಳಿ

ಟೋಲ್ ನಲ್ಲಿ ಹಣ ಕಟ್ಟಿ ಲಾರಿ ಮುಂದೆ ಸಾಗುವ ವೇಳೆ ಏಕಾಏಕಿ ಡಿಸೇಲ್ ಟ್ಯಾಂಕ್ ಸ್ಪೋಟಗೊ‌ಂಡಿದೆ.ಈ ಸಂದರ್ಭದಲ್ಲಿ ಎರಡು ಟೋಲ್ ಸಂಗ್ರಹ ಘಟಕಗಳು ಸುಟ್ಟು ಕರಕಲಾಗಿವೆ. ಇದರಿಂದಾಗಿ ಹೆದ್ದಾರಿಯಲ್ಲಿ ಒಂದು ಗಂಟೆಯ ಕಾಲ ವಾಹನ ಸಂಚಾರ ಸ್ಥಗೀತಗೊಂಡಿದೆ. ಅಲ್ಲದೆ, ಟೋಲ್ ನಾಕಾ ಸಿಬ್ಬಂದಿ ಭಯಬೀತರಾಗಿ ಸ್ಥಳದಿಂದ ಓಡಿ ಹೋಗಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ಬಂದಿದ್ದು ಬೆಂಕಿ ನಂದಿಸಲಾಗಿದೆ. ಘಟನೆಯಲ್ಲಿ ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net