ಎಳನೀರು ತೆಗೆಯಲು ತೆಂಗಿನ ಮರವೇರಿದ ವ್ಯಕ್ತಿ ಕೆಳಗೆ ಬಿದ್ದು ಸಾವು

Crime Logo
Published on

ರಟ್ಟಿಹಳ್ಳಿ: ಮರದಲ್ಲಿದ್ದ ಎಳನೀರು ಕೆಡವಲು ಮರದ ಹತ್ತಿದ್ದ ವ್ಯಕ್ತಿಯೊಬ್ಬ ಕೆಳಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಹಿರೇಮೊರಬ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಲಿಂಗರಾಜ ಶಂಭಪ್ಪ ಗಂಗಾಯಿಕೊಪ್ಪ (34) ಮೃತ ವ್ಯಕ್ತಿ.
ಇವರು ಜಮೀನಿನಲ್ಲಿನ ತೆಂಗಿನ ಮರದಲ್ಲಿದ್ದ ಎಳನೀರು ಕೆಡವಲು ಮರ ಏರಿದಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net