ಶುದ್ಧ ಕುಡಿವ ನೀರು ಪೂರೈಕೆಗೆ ಕ್ರಮವಹಿಸಿ: ಲಿಂಗಸುಗೂರಿನ 7ನೇ ವಾರ್ಡ್ ನಿವಾಸಿಗಳ ಒತ್ತಾಯ

060620 Lingasuguru People Appeal for Pure Drinking Water
Published on

ಲಿಂಗಸುಗೂರು: ಪಟ್ಟಣದ 7ನೇ ವಾರ್ಡ್‌ನಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಕೂಡಲೇ ಶುದ್ಧ ಕುಡಿವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ವಾರ್ಡ್ ನಿವಾಸಿಗಳು ಎಸಿ ರಾಜಶೇಖರ ಡಂಬಳರಿಗೆ ಶುಕ್ರವಾರ ಮನವಿ ಮಾಡಿದರು.

ವಾರ್ಡ್‌ನ ಎನ್‌ಜಿಒ ಕಾಲನಿಯಲ್ಲಿ ಕಳೆದ ಒಂದೆರಡು ತಿಂಗಳಿಂದ ಕಲುಷಿತ ನೀರು ಸರಬರಾಜು ಆಗುತ್ತಿದೆ. ನೀರು ಪೂರೈಸುವ ಪೈಪ್‌ಲೈನ್‌ನಲ್ಲಿ ಚರಂಡಿ ನೀರು ಮಿಶ್ರಣವಾಗುತ್ತಿರುವ ಅನುಮಾನ ವ್ಯಕ್ತವಾಗುತ್ತಿದೆ. ಮೂರು ದಿನಗಳಿಗೊಮ್ಮೆ ಪೂರೈಸುವ ನೀರು ದುರ್ವಾಸನೆಯಿಂದ ಕೂಡಿರುತ್ತದೆ. ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನಿವಾಸಿಗಳಾದ ಶಿವಾನಂದ ಐದನಾಳ, ಶೇಖರಯ್ಯಸ್ವಾಮಿ ಹಿರೇಮಠ, ಬಸಣ್ಣ ಸರ್ಜಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net