ಫ್ರೀ ಸ್ಟೈಲ್ ವಾಕಿಂಗ್ ಸ್ಪರ್ಧೆ

new pm 3
Published on

ಹುಬ್ಬಳ್ಳಿ: ಇಲ್ಲಿನ ಆರ್.ಕೆ. ಟೈಗರ್ಸ್ ಸ್ಪೋರ್ಟ್ಸ್ ಫೌಂಡೇಷನ್ ವತಿಯಿಂದ ಆರೋಗ್ಯಕ್ಕಾಗಿ ನಡಿಗೆ - ಫ್ರೀ ಸ್ಟೈಲ್ ವಾಕಿಂಗ್ ಸ್ಪರ್ಧೆಯನ್ನು ಡಿ.8ರಂದು ಉಣಕಲ್ ಕೆರೆ ಸುತ್ತಲಿನ ಪ್ರದೇಶದಲ್ಲಿ ಆಯೋಜಿಸಲಾಗಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಫೌಂಡೇಷನ್ ಅಧ್ಯಕ್ಷ ಕಿರಣ ಪವಾರ, ಎಚ್​ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಸಹಯೋಗದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಬಹುಮಾನ ನೀಡಲಾಗುವುದು.

40 ರಿಂದ 50 ಹಾಗೂ 50 ರಿಂದ 60 ವರ್ಷದವರು 5 ಕಿಮೀ ನಡಿಗೆ ಸ್ಪರ್ಧೆಯಲ್ಲಿ ಮತ್ತು 60 ವರ್ಷ ಮೇಲ್ಪಟ್ಟವರು 2 ಕಿಮೀ ನಡಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಎಂದರು. ಫೌಂಡೇಷನ್ ಉಪಾಧ್ಯಕ್ಷ ರಂಗನಗೌಡ ಚಿಕ್ಕನಗೌಡ್ರ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net