

ಕೆ.ಆರ್.ಸಾಗರ : ಕೃಷ್ಣರಾಜಸಾಗರದ ಸರ್ಕಾರಿ ಹಣ್ಣಿನ ತೋಟದಲ್ಲಿ ಉತ್ತಮ ಗುಣ ಮಟ್ಟದ ಟಿ ಮತ್ತು ಡಿ , ತಿಪಟೂರು ಟಾಲ್ ತಳಿಯ ತೆಂಗಿನ ಸಸಿಗಳು ಲಭ್ಯವಿದೆ ಎಂದು ಕೆ.ಆರ್.ಸಾಗರ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ (ರಾಜ್ಯ ವಲಯ)ಗುರುಸ್ವಾಮಿ ತಿಳಿಸಿದ್ದಾರೆ. ಟಿ ಮತ್ತು ಡಿ ತಳಿ ತೆಂಗಿನ ಸಸಿಗೆ 170 ರೂ. ಮತ್ತು ತಿಪಟೂರ್ ಟಾಲ್ ತಳಿಗೆ 75 ರೂ. ದರ ನಿಗದಿ ಪಡಿಸಲಾಗಿದೆ. ಆಸಕ್ತ ರೈತರು ತಮ್ಮ ಆಧಾರ್ ಮತ್ತು ಆರ್‌ಟಿಸಿ ಯೊಂದಿಗೆ ಕೆ.ಆರ್.ಸಾಗರದ ಉತ್ತರ ಬೃಂದಾವನದಲ್ಲಿನ ಸರ್ಕಾರಿ ಹಣ್ಣಿನ ತೋಟದಲ್ಲಿನ ಕ್ಷೇತ್ರ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಲು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಶ್ರೀಶ ಕುಮಾರ್ (97409 75342) ಮತ್ತು ಅಮಿತ್ (97423 52314 ಅವರನ್ನು ಸಂಪರ್ಕಿಸಬಹುದು.