

ಶ್ರೀನಿವಾಸಪುರ: ಅನೇಕ ಮಹನೀಯರ ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ$್ಯ ಸಿಕ್ಕಿದ್ದು, ಅದನ್ನ ಉಳಿಸುವಕೊಳ್ಳುವ ಕಾರ್ಯ ಆಗಬೇಕಿದೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲರೆಡ್ಡಿ ತಿಳಿಸಿದರು.
ನಗರದಲ್ಲಿ ಗುರುವಾರ ಬಿಜೆಪಿಯಿಂದ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ದೇಶವನ್ನು ಹಗಲಿರಳು ನಮ್ಮ ಸೈನಿಕರು ಕಾಯುತ್ತಿದ್ದಾರೆ. ಅವರಿಗೆ ಮನ@ಪೂರ್ವಕಾಗಿ ಅಭಿನಂದನೆ ಸಲ್ಲಿಸಬೇಕು. ನಾವು ಸೈನಿಕರ ಬೆಂಬಲಕ್ಕೆ ನಿಂತು ಯಾವುದೇ ರೀತಿ ದೇಶದ್ರೋಹ ಕೆಲಸ ಆಗದಂತೆ ತಡೆಯಬೇಕು ಎಂದರು.
ಡಾ.ಬಿ.ಆರ್. ಅಂಬೇಡ್ಕರ್ ರಚಸಿರುವ ಸಂವಿಧಾನದಿಂದ ಇಂದು ನಾವು ಬದಕು ಕಟ್ಟಿಕೊಳ್ಳುತ್ತಿದ್ದು, ಅವರ ಆಶಯಕ್ಕೆ ನಾವೆಲ್ಲೂರು ಗೌರವ ಸಲ್ಲಿಸಬೇಕೀದೆ ಎಂದು ಮಂಡಲ ಅಧ್ಯಕ್ಷ ರೋಣುರು ಆರ್.ಎನ್.ಚಂದ್ರಶೇಖರ್ ತಿಳಿಸಿದರು.
ತಹಸೀಲ್ದಾರ್ ಕಚೇರಿ ಆವರಣದಲ್ಲಿರುವ ಅಂಬೆಡ್ಕರ್ ಪುತ್ಥಳಿಗೆ ಪುಷ್ಪಮಾಲೆ ಸಮರ್ಪಿಸಲಾಯಿತು. ಪಟ್ಟಣದ ವರದಬಾಲಂಜನೇಯ ಸ್ವಾಮಿ ದೇವಾಲಯದಿಂದ ಮುಳಬಾಗಿಲು ವೃತ್ತದವರೆಗೂ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಯಿತು.