ನಾಮ ಸಂಕೀರ್ತನೆಯಿ೦ದ ಭಗವಂತನ ಆರಾಧನೆ ಶ್ರೇಷ್ಠ

6 Dwd 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಾಮ ಸಂಕೀರ್ತನೆ ಭಗವಂತನನ್ನು ಆರಾಧಿಸಲು ಇರುವ ಏಕೈಕ ಶ್ರೇಷ್ಠ ಮಾರ್ಗ. ಆತನ ಸ್ತುತಿ ಮಾಡುವುದರ ಮೂಲಕ ಜೀವನ ಪಾವನವಾಗಿಸಿಕೊಳ್ಳಬೇಕು ಎಂದು ಉಡುಪಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರು ಹೇಳಿದರು.

ಇಲ್ಲಿನ ಹನುಮಂತನಗರದ ಶ್ರೀಕೃಷ್ಣ, ಶ್ರೀ ರಾಘವೇಂದ್ರ, ಮಹಾಗಣಪತಿ ದೇವತಾ ಸಮುಚ್ಚಯದಲ್ಲಿ ಆಷಾಢ ಏಕಾದಶಿ ಪ್ರಯುಕ್ತ ಭಾನುವಾರ ಆಯೋಜಿಸಿದ್ದ `ಭಕ್ತಿಯಿಂದ ಮುಕ್ತಿ' ಅಖಂಡ ಭಜನೆ ಕಾರ್ಯಕ್ರಮ ಉದ್ಘಾಟಿಸಿ, ತಪ್ತ ಮುದ್ರಾಧಾರಣೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.

ಭಜನೆ ಜತೆಗೆ ಭಾಗವತ ಶ್ರವಣ ಮಾಡಿದರೆ ಸಿಗುವ ಪುಣ್ಯ ಇನ್ನೂ ಹೆಚ್ಚಿನದು. 4 ತಿಂಗಳು ಭಗವಂತ ಯೋಗನಿದ್ರೆಯಲ್ಲಿರುತ್ತಾನೆ. ಲೋಕಲ್ಯಾಣಾರ್ಥ ಮಾಡುವ ಈ ನಿದ್ರೆ ವೇಳೆ ಆತನನ್ನು ಮನಃಪೂರ್ವಕವಾಗಿ ಭಜಿಸಿದಾಗ ಅಪಾರ ಪುಣ್ಯ ಪ್ರಾಪ್ತಿಯಾಗುತ್ತದೆ. ಏಕಾದಶಿ ದಿನ ಉಪವಾಸ ಮಾಡಿದರೆ ದೇಹದ ಜತೆಗೆ ಮನಸ್ಸು ಕೂಡ ಶುದ್ಧಿಯಾಗುತ್ತದೆ. ಕಾಮ, ಕ್ರೋಧ ಅಳಿಯುತ್ತದೆ. ದೇವರಲ್ಲಿ ಭಕ್ತಿ ಜಾಗೃತವಾಗುತ್ತದೆ. ಇಂದ್ರಿಯಗಳ ಜತೆಗೆ ಮನಸ್ಸನ್ನು ನಿಗ್ರಹಿಸಿದಾಗ ಶರೀರ ಹಾಗೂ ಜೀವನ ಸಮತೋಲಿತವಾಗುತ್ತದೆ ಎಂದರು.

ಇದೇವೇಳೆ ಶ್ರೀಗಳು ನೂರಾರು ಭಕ್ತರಿಗೆ ತಪ್ತ ಮುದ್ರಾಧಾರಣೆ ನಡೆಸಿಕೊಟ್ಟರು. ಭಜನಾ ಮಂಡಳಿಗಳಿ೦ದ ಅಖಂಡ ಭಜನೆ ಸೇವೆ ನಡೆಯಿತು.

ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಭಾದ ಪದಾಧಿಕಾರಿಗಳಾದ ಅನಂತ ಉಡುಪಿ, ಅನಂತ ಪದ್ಮನಾಭ ತಂತ್ರಿ, ಶ್ರೀನಿವಾಸ ರೆಂಜಾಳ, ಪ್ರಶಾಂತ ತಂತ್ರಿ, ಶಶಿಧರ, ಮುರಳೀಧರ ಉಡುಪಿ, ಸುಜಯ ಉಡುಪಿ, ಶ್ರೀನಿವಾಸ ರೆಂಜಾಳ, ಕೆಎಸ್‌ಎನ್ ಉರಾಳ, ಬಿ.ಪಿ. ರಾವ್, ಅನಂತಕೃಷ್ಣ ಕಾರಂತ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net