ಹಿಂದು ಧರ್ಮದಲ್ಲಿ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ

3
Published on

ಮಂಡ್ಯ : ಹಿಂದು ಧರ್ಮದ ಮೇಲೆ ಅನ್ಯರಿಂದ ಸಾಕಷ್ಟು ದಾಳಿ ನಡೆದರೂ ಆಧ್ಯಾತ್ಮಿಕ ಶಕ್ತಿಯಿಂದ ಇನ್ನೂ ಉಳಿದಿದೆ ಎಂದು ನೇತ್ರ ತಜ್ಞೆ ಡಾ.ಮಣಿಕರ್ಣಿಕಾ ಹೇಳಿದರು.


ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ಸೋಮವಾರ ಆಯೋಜಿಸಿದ್ದ ಶಂಕರಾಚಾರ್ಯರ ಜಯಂತಿಯಲ್ಲಿ ಅವರು ಮಾತನಾಡಿದರು.
ಸರ್ವೇ ಜನೋ ಸುಖಿನೋ ಭವಂತು ಎಂಬುದು ಸನಾತನ ಹಿಂದು ಧರ್ಮದ ಮುಖ್ಯ ಧ್ಯೇಯವಾಗಿದೆ. ಈ ಧರ್ಮದಲ್ಲಿ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಇದ್ದು, ಹಿಂಸೆ, ಕ್ರೂರತನ, ಕತ್ತಿ ಎತ್ತುವ ಸಂಸ್ಕೃತಿ ಈ ಧರ್ಮದಲಿಲ್ಲ. ಧರ್ಮದ ರಕ್ಷಣೆಯೇ ಹಿಂದು ಧರ್ಮದ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.


ಕೇರಳದಲ್ಲಿ ಜನ್ಮ ತಾಳಿದ ಶಂಕರಚಾರ್ಯರು ಚಿಕ್ಕ ವಯಸ್ಸಿನಲ್ಲೇ ಸನ್ಯಾಸತ್ವ ಸ್ವೀಕರಿಸಿ ಧರ್ಮದ ರಕ್ಷಣೆ ಮಾಡಿದರು. ಇದಕ್ಕಾಗಿ ನಾಲ್ಕು ದಿಕ್ಕುಗಳಲ್ಲಿಯೂ ಪೀಠ ಸ್ಥಾಪಿಸಿದರು. ರಾಜ್ಯದಲ್ಲಿರುವ ಶೃಂಗೇರಿ ಪೀಠ ಇದರಲ್ಲಿ ಒಂದಾಗಿದೆ. ಮಹನೀಯರನ್ನು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ ಎಂದರು.


ಉಪ ತಹಸೀಲ್ದಾರ್ ಎಸ್.ಸಂತೋಷ್ ಮಾತನಾಡಿ, ಶಂಕರಾಚಾರ್ಯರು ಸಮಾಜಮುಖಿಯಾಗಿದ್ದರು. ದೇಶದ ಸಾಂಸ್ಕೃತಿಕ ಇತಿಹಾಸದಲ್ಲಿ ಪ್ರಜ್ವಲಿಸುವ ಜ್ಯೋತಿಯಾಗಿ ಬೆಳಗುತ್ತಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳ ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.


ಕಾರ್ಯಕ್ರಮದಲ್ಲಿ ಕಂದಾಯ ಶಿರಸ್ತೇದಾರ್ ಮೋಹನ್, ಬ್ರಾಹ್ಮಣ ಮಹಾಸಭಾ ತಾಲೂಕು ಅಧ್ಯಕ್ಷ ಮಂಜುನಾಥ್, ದಲಿತ ಮುಖಂಡ ಡಿ.ಕೆ.ಅಂಕಯ್ಯ, ಕಿಚ್ಚ ಭರತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net