

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲನಲ್ಲಿರುವ ಐ.ಜಿ. ಹಿರೇಗೌಡರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.
ಉಣಕಲ್ಲ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಬಿ.ಎನ್. ನವಲಗುಂದ, ಸ್ವಾತಂತ್ರ್ಯ ಹೋರಾಟಗಾರರಾದ ನರಗುಂದ ಬಾಬಾಸಾಹೇಬ್ ಮತ್ತು ಹಮ್ಮಂಗಿ ಕೆಂಚನಗೌಡ್ರ ಅವರ ಬಗ್ಗೆ ಮಾತನಾಡಿದರು.
ದತ್ತು ಮಕ್ಕಳಿಗೆ ಹಕ್ಕಿಲ್ಲ ಎನ್ನುವ ಬ್ರಿಟಿಷರ ನೀತಿಯ ವಿರುದ್ಧ ಸೈನ್ಯ ಕಟ್ಟಿ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದ ಹಲವರ ವಿಷಯಗಳನ್ನು ವಿವರಿಸಿದರು.
ಅತಿಥಿಗಳಾಗಿದ್ದ ಕಾಲೇಜಿನ ಸ್ಥಳಿಯ ಸಲಹಾ ಸಮಿತಿ ಅಧ್ಯಕ್ಷ ಶಿವಾನಂದ ಹೆಬಸೂರ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ರಾಷ್ಟ್ರಪ್ರೇಮ, ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಮಾದರಿ ಸಮಾಜ ನಿರ್ಮಾಣವಾಗಲು ಉತ್ತಮ ನಾಗರೀಕರಾಗಬೇಕೆಂದು ಹೇಳಿದರು.
ಜಾನಪದ ಗಾಯಕ ಗದಿಗಯ್ಯ ಹಿರೇಮಠ ಹಾಗೂ ತಂಡದವರು ಲಾವಣಿ ಪದ, ಗೀಗಿ ಪದ, ದೇಶಭಕ್ತಿ ಹಾಡುಗಳ ಮೂಲಕ ಸ್ವಾತಂತ್ರ್ಯದ ಮಹತ್ವವನ್ನು ವಿವರಿಸಿದರು.
ಕಾಲೇಜಿನ ಸ್ಥಳಿಯ ಸಲಹಾ ಸಮಿತಿ ಸದಸ್ಯರಾದ ವಿಜಯಕುಮಾರ ಪಾಟೀಲ, ಮೋಹನ್ ಬಡ್ನಿ, ಕಾರ್ಯದರ್ಶಿ ಶಿವಕುಮಾರಗೌಡ ಬಿ.ಜಿ, ಪ್ರಾಚಾರ್ಯ ಮೇಘಾ ಎಂ.ಜೆ, ಉಪನ್ಯಾಸಕರು ಉಪಸ್ಥಿತರಿದ್ದರು.
ಬಸವರಾಜ ಕುರ್ತಕೋಟಿ ನಿರೂಪಿಸಿದರು. ವೀರೇಶ ಪಾಟೀಲ ಸ್ವಾಗತಿಸಿದರು. ಗಣೇಶ್ ಮಾಂಡೇಕರ ವಂದಿಸಿದರು.