

ವಿಜಯವಾಣಿ ಸುದ್ದಿಜಾಲ ಧಾರವಾಡ
ಯಾರು ಸಮಾಜಕ್ಕಾಗಿ ಬದುಕುತ್ತಾರೋ ಅಂಥವರನ್ನು ಸಮಾಜವು ಸದಾ ಸ್ಮರಿಸುತ್ತದೆ. ಆದ್ದರಿಂದ ನಾವೆಲ್ಲರೂ ನಮಗೋಸ್ಕರ ಬದುಕದೆ, ಸಮಾಜಕ್ಕಾಗಿ, ಸಮಾಜದ ಏಳಿಗೆಗಾಗಿ ಬದುಕಬೇಕು ಎಂದು ನಿವೃತ್ತ ಪ್ರಾಚಾರ್ಯ ಪ್ರಲ್ಹಾದ ಯಾವಗಲ್ ಹೇಳಿದರು.
ನಗರದ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಅವಿಭಜಿತ ಧಾರವಾಡ ಜಿಲ್ಲೆಯ ಸ್ವಾತಂತ್ರ‍್ಯ ಹೋರಾಟಗಾರರ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತಿಹಾಸ ಸಂಘದ ಅಧ್ಯಕ್ಷ ಪ್ರಕಾಶ ಸುಣಗಾರ ಮಾತನಾಡಿ, ಯುವಕರು ಚಲನಚಿತ್ರದ ನಾಯಕರನ್ನು ಹೀರೊಗಳೆಂದು ಆರಾಽಸದೆ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ತಂದೆ- ತಾಯಿಯನ್ನು ನಾಯಕರನ್ನಾಗಿ ಮಾಡಿಕೊಂಡು ಉತ್ತಮ ಸಂಸ್ಕಾರವAತರಾಗಿ ಬಾಳಬೇಕು ಎಂದರು.
ಶಾರದಾ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಕೆ.ಎಸ್. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಗೌರವ ಅಧ್ಯಕ್ಷ ಎಸ್.ಬಿ. ಮುದಿಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇತಿಹಾಸ ಉಪನ್ಯಾಸಕ ಎಚ್.ಬಿ. ಬ್ಯಾಡಗಿ `ಬುರ್ಲಿ ಬಿಂದು ಮಾಧವಾಚಾರ್ಯ' ಕುರಿತು ವಿಶೇಷ ಉಪನ್ಯಾಸ ನೀಡಿದರು.
ಶಾರದಾ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ವಿ. ತಿಮ್ಮಾಪುರ ಅಧ್ಯಕ್ಷತೆ ವಹಿಸಿದ್ದರು.
ನವಲಗುಂದದ ಇಮಾಮಸಾಬ ವಲ್ಲೆಪ್ಪನವರ ಕಲಾತಂಡದಿAದ ದೇಶಭಕ್ತಿಗೀತೆ ಮತ್ತು ಸ್ವಾತಂತ್ರ‍್ಯ ಹೋರಾಟಗಾರರ ಕುರಿತು ಲಾವಣಿ ಪದಗಳನ್ನು ಹಾಡಿ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮೂಡಿಸಿದರು.
ಪ್ರಾಚಾರ್ಯ ಎಸ್.ಎ. ಕುರಿ ಸ್ವಾಗತಿಸಿದರು. ಗೀತಾ ಚಿಕ್ಕರಡ್ಡಿ ವಂದಿಸಿದರು. ಡಿ.ವಿ. ಪಟ್ಟಣ, ಎ.ಜಿ. ಮುಳ್ಳೂರ ಹಾಗೂ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಇದ್ದರು.