ಸ್ವಾತಂತ್ರೃ ಹೋರಾಟಕ್ಕೆ ವಾಸುದೇವ ಫಡಕೆ ಕೊಡುಗೆ ಅಪಾರ

Freedom Fighter, Vasudeva Phadake, Ramanagowda Patila, Devaranavadagi, Alamela,
ಆಲಮೇಲ ತಾಲೂಕಿನ ದೇವರನಾವದಗಿ ಗ್ರಾಮದಲ್ಲಿ ಸ್ವಾತಂತ್ರೃ ಹೋರಾಟಗಾರ ವಾಸುದೇವ ಬಲವಂತ ಡಕೆ ಜಯಂತಿ ಕಾರ್ಯಕ್ರಮವನ್ನು ರಾಮನಗೌಡ ಪಾಟೀಲ ಉದ್ಘಾಟಿಸಿದರು. ಬಸವರಾಜ ಹೂಗಾರ, ಶ್ರೀಮಂತ ನಾಗೂರ, ಶ್ರೀಶೈಲಗೌಡ ಮಾಗಣಗೇರಿ ಇತರರಿದ್ದರು.
Published on

ಆಲಮೇಲ: ಭಾರತಮಾತೆಯ ದಾಸ್ಯಮುಕ್ತಿಗಾಗಿ ಮನೆ-ಮಠ, ಮಡದಿ-ಮಕ್ಕಳನ್ನು ತೊರೆದು, ಹಗಲಿರುಳು ಭಾರತ ಸ್ವಾತಂತ್ರೃಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಕ್ರಾಂತಿಕಾರಿ ವಾಸುದೇವ ಬಲವಂತ ಫಡಕೆ ಅವರಾಗಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳರ ಪುತ್ರ ರಾಮನಗೌಡ ಪಾಟೀಲ ಹೇಳಿದರು.

ತಾಲೂಕಿನ ದೇವರನಾವದಗಿ ಗ್ರಾಮದ ಮಲ್ಲಿಕಾರ್ಜುನ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಿದ ಸ್ವಾತಂತ್ರೃ ಹೋರಾಟಗಾರ ವಾಸುದೇವ ಬಲವಂತ ಫಡಕೆ ಅವರ 179ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹುಟ್ಟುತ್ತಲೇ ಕ್ರಾಂತಿಕಾರಿಯಾಗಿದ್ದ ಫಡಕೆ ಅವರು ದೇಶಾದ್ಯಂತ ಸ್ವಾತಂತ್ರೃದ ಕಿಚ್ಚು ಹಬ್ಬಿಸಿ ಎಲ್ಲ ಸಮಾಜದವರನ್ನು ಒಂದುಗೂಡಿಸಿ ಸೈನ್ಯ ಕಟ್ಟಿ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದರು. ಅಂತಹ ಮಹಾನ್ ಕ್ರಾಂತಿಕಾರಿ ಫಡಕೆ ಅವರ ಜಯಂತಿ ಕಾರ್ಯಕ್ರಮ ಅರ್ಥಪೂರ್ಣವಾಗಬೇಕು ಎಂದರು.

ಜಿಲ್ಲಾ ಬಿಜೆಪಿ ಯುವ ಘಟಕದ ಅಧ್ಯಕ್ಷ ಬಸವರಾಜ ಹೂಗಾರ, ದೇವಣಗಾಂವ ಜಿಪಂ ಮಾಜಿ ಸದಸ್ಯ ಶ್ರೀಮಂತ ನಾಗೂರ, ಶ್ರೀಶೈಲಗೌಡ ಮಾಗಣಗೇರಿ, ಶಿಕ್ಷಕ ಶಿವಶರಣ ಗುಗ್ಗರಿ, ಅಶೋಕ ಯರಗಲ್ಲ, ಶಂಕರ ಗುಗ್ಗರಿ, ಚನ್ನು ನಾರಾಯಣಪುರ, ಸಂಘದ ಅಧ್ಯಕ್ಷ ಮಡಿವಾಳ ಕುಮಸಿ, ಜಿಲ್ಲಾ ಯುವಘಟಕದ ಉಪಾಧ್ಯಕ್ಷ ಶಿವುಕುಮಾರ ಬಮ್ಮನಜೋಗಿ ಮಾತನಾಡಿದರು.

ಉಪನ್ಯಾಸಕ ರಮೇಶ ಬಿರಾದಾರ, ರೇಷ್ಮೆ ಅಧಿಕಾರಿ ಜಗದೀಶ ಗುಗ್ಗರಿ, ಬಿಸಿಯೂಟ ಅಧಿಕಾರಿ ನಿಂಗಣ್ಣ ಸಣ್ಣಕ್ಕಿ, ಶಿಕ್ಷಕ ನಿಂಗಣ್ಣ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.

ಬಸಲಿಂಗಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಬಸವರಾಜ ಬಮ್ಮನಜೋಗಿ, ಭೀಮರಾಯ ಜನಿವಾರ, ಶಿವಲಿಂಗಪ್ಪ ಕುಮಸಿ, ಶರಣು ಬಮ್ಮನಜೋಗಿ, ರಾಮಚಂದ್ರ ದೇಸುಣಗಿ, ಬಾಪೂರಾಯ ಬಿರಾದಾರ, ನಿಂಗಣ್ಣ ಸಿಂದಗಿ, ಸಂತೋಷ ಗೋಗಿ, ಗಂಗಾಧರ ಬಂಡಗರ, ಮಲಕಣ್ಣ ನೆಲ್ಲಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net