ಉಣಕಲ್ಲ ಕಾಲೇಜಿನಲ್ಲಿ ಹೋರಾಟಗಾರರ ಸ್ಮರಣೆ

IMG_20240801_210516_533.jpg
Published on

ಹುಬ್ಬಳ್ಳಿ: ಬ್ರಿಟಿಷರ ದಬ್ಬಾಳಿಕೆ ಶೋಷಣೆಯಿಂದ ಮುಕ್ತಗೊಳಿಸಿ ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಧಾರವಾಡ ಜಿಲ್ಲೆಯ ಅನೇಕರು ಕೆಚ್ಚೆದೆಯಿಂದ ಹೋರಾಟ ಮಾಡಿದ್ದಾರೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಬಿ.ಎನ್. ನವಲಗುಂದ ಹೇಳಿದರು.

ಇಲ್ಲಿಯ ಉಣಕಲ್ಲ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಅವಿಭಜಿತ ಧಾರವಾಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

ಸ್ವಾತಂತ್ರ್ಯ ಹೋರಾಟಗಾರರಲ್ಲಿ ನರಗುಂದದ ಬಾಬಾಸಾಹೇಬರು, ಮುಂಡರಗಿಯ ಭೀಮರಾಯರು, ಹಮ್ಮಿಗಿಯ ದೇಸಾಯಿ ಮನೆತನದ ಕೆಂಚನಗೌಡರು ಪ್ರಮುಖರಾಗಿದ್ದಾರೆ ಎಂದರು.

ನಿವೃತ್ತ ಪ್ರಾಚಾರ್ಯ ಯು.ಆರ್. ಮಿರಜಕರ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯದ ಅರ್ಥವೇ ಕಳೆದು ಹೋಗಿದೆ. ಸ್ವಾತಂತ್ರ್ಯ ಎಂಬುದು ಸ್ವೇಚ್ಛಾಚಾರವಾಗಿದೆ ಎಂದು ಖೇದ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಎಸ್.ವೈ. ನವಲಗುಂದ ಮಾತನಾಡಿದರು. ಪ್ರೊ. ಎಸ್.ಬಿ. ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.

ಖ್ಯಾತ ಜಾನಪದ ಕಲಾವಿದ ಇಮಾಮಸಾಹೇಬ ವಲ್ಲೇಪ್ಪನವರ ತಂಡದವರಿಂದ ಡೊಳ್ಳಿನ ಪದಗಳ ಕಾರ್ಯಕ್ರಮ ಪ್ರೇಕ್ಷಕರಿಗೆ ಮುದ ನೀಡಿತು. ದಾವಲಸಾಬ ವಲ್ಲೇಪ್ಪನವರ, ದ್ಯಾಮಣ್ಣ ಪೂಜಾರ, ನಿಂಗಪ್ಪ ದೊಡ್ಡಪೂಜಾರ, ಸಿ.ಎಂ. ಚನ್ನಬಸಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net