ಉಚಿತ ಯೋಗ, ಧ್ಯಾನ, ನಿಸರ್ಗ ಚಿಕಿತ್ಸಾ ಶಿಬಿರ

Published on

ಕೆ.ಎಂ.ದೊಡ್ಡಿ: ಇಲ್ಲಿನ ವೀರಶೈವ ಸಮುದಾಯ ಭವನದಲ್ಲಿ ಡಿ.24 ರಿಂದ ಉಚಿತ ಯೋಗ, ಧ್ಯಾನ ಮತ್ತು ನಿಸರ್ಗ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.

ಶ್ರೀ ವೀರಶೈವ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ಬಸವ ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ಯೋಗಗುರು ವೀರೇಶ್ ಗುರೂಜಿ ಅವರಿಂದ ಉಚಿತ ಯೋಗ, ಧ್ಯಾನ ಮತ್ತು ನಿಸರ್ಗ ಚಿಕಿತ್ಸಾ ಶಿಬಿರದಲ್ಲಿ ಸರ್ವ ರೋಗಗಳಿಗೂ ಔಷಧರಹಿತ ಚಿಕಿತ್ಸಾ ಸಲಹೆಗಳನ್ನು ನೀಡಲಾಗುವುದು ಎಂದು ಶಿಬಿರದ ಸಂಯೋಜಕ ವೈ.ಬಿ.ಶ್ರೀಕಂಠಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಬಿರದಲ್ಲಿ ಹೊಟ್ಟೆನೋವು, ಭಯ, ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಮತ್ತು ಹೆಚ್ಚಿಸಿಕೊಳ್ಳಲು ಈ ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆಯಲು ಕೋರಿದೆ. ಯೋಗ, ಪ್ರಾಣಾಯಾಮ, ಧ್ಯಾನ ಶಿಬಿರ ಬೆಳಗ್ಗೆ 5-15 ರಿಂದ ಸಂಜೆ 7 ಗಂಟೆವರೆಗೆ. ನಿಸರ್ಗ ಚಿಕಿತ್ಸೆ ಬೆಳಗ್ಗೆ 7-00 ರಿಂದ 8 ಗಂಟೆವರೆಗೆ ಜರುಗಲಿದ್ದು, ಹೆಚ್ಚಿನ ವಿವರಗಳಿಗೆ ವೀರೇಶ್ ಗೂರೂಜಿ ಮೊ: 94812 82365, ಜಿ.ಆರ್.ಶಿವಣ್ಣ: ಮೊ: 94491 29865, ಸಂಪರ್ಕಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net