21ರವರೆಗೆ ಉಚಿತ ಯೋಗ ಶಿಬಿರ

depositphotos_390325452-stock-photo-young-people-practicing-yoga-in.jpg
Published on

ಶ್ರೀರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ವತಿಯಿಂದ ಈಗಾಗಲೇ ಆರಂಭಗೊಂಡಿರುವ ಉಚಿತ ಯೋಗ ಶಿಬಿರವು ಜೂ.21ರವರೆಗೆ ನಡೆಯಲಿದೆ ಎಂದು ಯೋಗ ಶಿಕ್ಷಕ ರವಿಕುಮಾರ್ ತಿಳಿಸಿದರು.


ಚಾಮುಂಡಿಪುರಂ ಒಂದನೇ ಮೇನ್, ನಾಲ್ಕನೇ ಅಡ್ಡ ರಸ್ತೆ 2870 ಸಂಖ್ಯೆ ನಿವಾಸ ಹಾಗೂ ಲಲಿತಾದ್ರಿಪುರ ರಸ್ತೆ ಜೆಎಸ್‌ಎಸ್ ಕಾಲೇಜು ಹತ್ತಿರದ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಶಿಬಿರ ನಡೆಯಲಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದು ಪ್ರಾಚೀನ ಗ್ರಂಥ ಆಧರಿಸಿದ ಯೋಗ ಶಿಕ್ಷಣವಾಗಿದೆ. ಹೆಚ್ಚಿನ ಮಾಹಿತಿಗೆ ಮೊ.96633 76393, 98455 20617 ಸಂಪರ್ಕಿಸಬಹುದು ಎಂದರು.

ಯೋಗ ಶಿಕ್ಷಕರಾದ ವೀಣಾ, ಗೌತಮ್, ನಿವೃತ್ತ ಕರ್ನಲ್ ಬಿ.ಎಸ್.ಗೋಕುಲ, ಲಿಂಗರಾಜು, ಶ್ರೀಧರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net