ಮಾನಸಿಕ, ದೈಹಿಕ ಆರೋಗ್ಯಕ್ಕೆ ಯೋಗಾಸನ ಪೂರಕ: ವಿಶ್ವನಾಥ ರೈ ಪೆರ್ಲ ಅನಿಸಿಕೆ

yoga day
ಪ್ರಾಂಶುಪಾಲ ವಿಶ್ವನಾಥ ರೈ ಪೆರ್ಲ ಶಿಬಿರ ಉದ್ಘಾಟಿಸಿದರು. ದೀಪಕ್ ಕಲ್ಲುಗುಡ್ಡೆ, ಜೆಸಿಐ ಕಡಬ ಕದಂಬದ ಅಧ್ಯಕ್ಷ ಜಾಫಿರ್ ಮಹಮ್ಮದ್, ಜೇಸಿ ಉಪಾಧ್ಯಕ್ಷ ಪ್ರಸನ್ನಕುಮಾರ್ ಪುತ್ರಬೈಲು ಮೊದಲಾದವರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಕಡಬ

ಮನುಷ್ಯನಿಗೆ ಆರೋಗ್ಯಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ದೈಹಿಕ ಮತ್ತು ಮಾನಸಿಕ ಆರೋಗ್ಯ ಅತ್ಯಂತ ಮಹತ್ವದ್ದು. ನಿತ್ಯ ಯೋಗಾಸನ ಅಭ್ಯಾಸವನ್ನು ಅಳವಡಿಸಿಕೊಂಡಲ್ಲಿ ನಾವು ಆರೋಗ್ಯಕರ ಜೀವನ ನಡೆಸಬಹುದು ಎಂದು ಕೊಕ್ಕಡ ಸರ್ಕಾರಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ರೈ ಪೆರ್ಲ ಅವರು ಅಭಿಪ್ರಾಯಪಟ್ಟರು.

ಉಜಿರೆಯ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಹಾಗೂ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ ಧರ್ಮಸ್ಥಳ ನೇತೃತ್ವದಲ್ಲಿ ಜೆಸಿಐ ಕಡಬ ಕದಂಬದ ಸಹಯೋಗದದೊಂದಿಗೆ ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಯೋಗ ಉಚಿತ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಶಿಬಿರದ ಸಂಯೋಜಕ, ಯೋಗ ತರಬೇತುದಾರ, ಉಜಿರೆಯ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ವಿದ್ಯಾರ್ಥಿ ದೀಪಕ್ ಕಲ್ಲುಗುಡ್ಡೆ ಮಾತನಾಡಿ, ಮಹಾ ವಿದ್ಯಾಲಯದ ವತಿಯಿಂದ ವಿವಿಧೆಡೆ ಯೋಗ ಉಚಿತ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಕಡಬದಲ್ಲಿ ಬೆಳಗ್ಗೆ ಮತ್ತು ಸಂಜೆಯ ಹೊತ್ತು ಶಿಬಿರ ಹಮ್ಮಿಕೊಳ್ಳಲಾಗಿದ್ದು, ಜೂ.21ರ ತನಕ ಶಿಬಿರ ನಡೆಯಲಿದೆ. ಆಸಕ್ತರು ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು ಎಂದರು.

ಜೆಸಿಐ ಕಡಬ ಕದಂಬದ ಅಧ್ಯಕ್ಷ ಜಾಫಿರ್ ಮಹಮ್ಮದ್ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಜೇಸಿ ಉಪಾಧ್ಯಕ್ಷ ಪ್ರಸನ್ನಕುಮಾರ್ ಪುತ್ರಬೈಲು, ಯೋಗ ತರಬೇತುದಾರರಾದ ಶಮಾ ಮಡ್ತಿಲ, ಸ್ಪೂರ್ತಿ ಕಡಬ ಉಪಸ್ಥಿತರಿದ್ದರು. ಜೆಸಿಐ ಕಡಬ ಕದಂಬ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್.ಕೆ.ಸ್ವಾಗತಿಸಿ, ವಂದಿಸಿದರು.

ನಾವು ದಿನವಿಡೀ ಲವಲವಿಕೆಯಿಂದ ಇರಬೇಕಾದರೆ ಉತ್ತಮ ವ್ಯಾಯಾಮ ಆಗತ್ಯ. ದಿನದ ಒಂದು ಹೊತ್ತು ಯೋಗಾಬ್ಯಾಸ ಮಾಡಿದರೆ ವ್ಯಾಯಾಮದ ಜತೆಗೆ ನಮಗೆ ಹಲವು ಪ್ರಯೋಜನಗಳಿವೆ. ಯೋಗಾಭ್ಯಾಸ ಕೇವಲ ಶಿಬಿರಕ್ಕೆ ಮಾತ್ರ ಸೀಮಿತವಾದರೆ ಉಪಯೋಗವಿಲ್ಲ. ಶಿಬಿರ ಮುಗಿದ ಬಳಿಕವೂ ನಿಯಮಿತವಾಗಿ ಯೋಗಾಭ್ಯಾಸ ಮಾಡಿದರೆ ಮಾತ್ರ ನಮಗೆ ಅದರ ಪ್ರಯೋಜನ ಸಿಗಲು ಸಾಧ್ಯ.- ವಿಶ್ವನಾಥ ರೈ ಪೆರ್ಲ, ಕೊಕ್ಕಡ ಸರ್ಕಾರಿ ಪ.ಪೂ.ಕಾಲೇಜಿನ ಪ್ರಾಂಶುಪಾಲ https://www.vijayavani.net/inauguration-of-bus-stand-in-konaje https://www.vijayavani.net/job-recruitment-in-kateelu-temple-degree-college

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net