ಐದು ವರ್ಷದೊಳಗಿನ ಮಕ್ಕಳಿಗೆ ಉಚಿತ ಶಸಚಿಕಿತ್ಸೆ

Free veterinary treatment for children under five years
ವಿಜಯಪುರದ ಬಿ.ಎಂ. ಪಾಟೀಲ ವೈದ್ಯಕಿಯ ಕಾಲೇಜಿನಲ್ಲಿ ಮಕ್ಕಳಲ್ಲಿ ಕಾಕ್ಲಿಯರ್​ ಇಂಪ್ಲಾಟ್​ನ ಪ್ರಯೋಜನಗಳ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ವಿವಿ ಕುಲಪತಿ ಡಾ. ಆರ್​.ಎಸ್​. ಮುಧೋಳ, ಸಂಪತ್​ ಗುಣಾರಿ, ಡಾ. ಅರವಿಂದ ಪಾಟೀಲ ಮತ್ತಿತರರಿದ್ದಾರೆ.
Published on

ವಿಜಯಪುರ :  ಶ್ರವಣ ದೋಷ ಸಮಸ್ಯೆಯಿಂದ ನರಳುತ್ತಿರುವ ಐದು ವರ್ಷದೊಳಗಿನ ಮಕ್ಕಳಿಗೆ ಸುವರ್ಣ ಆರೋಗ್ಯ ಸುರಾ ಯೋಜನೆಯಡಿ ಉಚಿತ ಶಸಚಿಕಿತ್ಸೆ ಮತ್ತು ಒಂದು ವರ್ಷದ ತರಬೇತಿ ಸೌಲಭ್ಯವಿದೆ. ಅಗತ್ಯವಿರುವ ಪೋಷಕರು ಅದರ ಸದುಪಯೋಗ ಪಡೆಯಬೇಕು ಎಂದು ಬಿಎಲ್​ಡಿಇ ಡೀಮ್ಡ್​ ವಿವಿ ಬಿ.ಎಂ. ಪಾಟೀಲ ವೈದ್ಯಕಿಯ ಕಾಲೇಜಿನ ಕುಲಪತಿ ಡಾ. ಆರ್​.ಎಸ್​. ಮುಧೋಳ ಹೇಳಿದರು.

ನಗರದ ಬಿಎಲ್​ಡಿಇ ಡೀಮ್ಡ್​ ವಿಶ್ವವಿದ್ಯಾಲಯದ ಶ್ರೀ ಬಿ.ಎಂ. ಪಾಟೀಲ ವೈದ್ಯಕಿಯ ಕಾಲೇಜಿನ ಟ್ರಾಮಾ ಬ್ಲಾಕ್​ನಲ್ಲಿ ಕಿವಿ, ಮೂಗು, ಗಂಟಲು ವಿಭಾಗದ ವತಿಯಿಂದ ಸೋಮವಾರ ಶ್ರವಣ ದೋಷ ಹೊಂದಿರುವ ಮಕ್ಕಳಲ್ಲಿ ಕಾಕ್ಲಿಯರ್​ ಇಂಪ್ಲಾಟ್​ನ ಪ್ರಯೋಜನಗಳು ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದದಲ್ಲಿ ಅವರು ಮಾತನಾಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸಂಪತ್​ ಗುಣಾರಿ ಮಾತನಾಡಿ, ಆಶಾ ಕಾರ್ಯಕರ್ತೆಯರು ಚಿಕಿತ್ಸೆ ಅಗತ್ಯವಿರುವ ಮಕ್ಕಳನ್ನು ಗುರುತಿಸಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಲು ಶ್ರಮಿಸಬೇಕು ಎಂದು ತಿಳಿಸಿದರು.

ಬೆಳಗಾವಿ ಜೆಎನ್​ ಮೆಡಿಕಲ್​ ಕಾಲೇಜಿನ ಕಾಕ್ಲಿಯರ್​ ಇಂಪ್ಲಾಟ್​ ಸರ್ಜನ್​ ಡಾ. ಪ್ರೀತಿ ಹಜಾರೆ, ಆಶಾ ಕಾರ್ಯಕರ್ತೆಯರಿಗೆ ಶ್ರವಣದೋಷ ಮತ್ತು ಕಾಕ್ಲಿಯರ್​ ಇಂಪ್ಲಾಂಟ್​ನಿಂದಾಗುವ ಲಾಭಗಳ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ಶಸಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಮಾತನಾಡಿದರು. ನಂತರ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಕಾಕ್ಲಿಯರ್​ ಇಂಪ್ಲಾಟ್​ ಕೋಆರ್ಡಿನೇಟರ್​ ಡಾ. ಲತಾದೇವಿ ಅವರು ಕಾಕ್ಲಿಯರ್​ ಇಂಪ್ಲಾಟ್​ ಸಮಸ್ಯೆ ಇರುವವರನ್ನು ಗುರುತಿಸುವುದು, ಶಸಚಿಕಿತ್ಸೆ ಮುಂತಾದ ವಿಷಯದ ಬಗ್ಗೆ ಆಶಾ ಕಾರ್ಯಕರ್ತೆಯರೊಡನೆ ಸಂವಾದ ನಡೆಸಿದರು. ನುರಿತ ಮಕ್ಕಳ ವೈದ್ಯರು, ಇಎನ್​ಟಿ, ವಾಕ್​ ಶ್ರವಣ ತರು, ವೈದ್ಯ ವಿದ್ಯಾರ್ಥಿಗಳು ಇದ್ದರು.

ಬಿ.ಎಂ. ಪಾಟೀಲ ವೈದ್ಯಕಿಯ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಆಸ್ಪತ್ರೆಯ ವೈದ್ಯಕಿಯ ಅಧೀಕ ಡಾ. ರಾಜೇಶ ಹೊನ್ನುಟಗಿ, ಸರ್ಕಾರಿ ಇಎನ್​ಟಿ ತಜ್ಞ ಡಾ. ಸಂಜಯ, ಆಸ್ಪತ್ರೆಯ ಇಎನ್​ಟಿ ವಿಭಾಗದ ಮುಖ್ಯಸ್ಥ ಡಾ. ಆರ್​.ಎನ್​. ಕರಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net