ಹಾಸನ ಸಾಹಿತ್ಯೋತ್ಸವಕ್ಕೆ ಬರುವವರಿಗೆ ಉಚಿತ ವಾಹನ ವ್ಯವಸ್ಥೆ

kasapa logo
Published on

ಚನ್ನರಾಯಪಟ್ಟಣ: ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದಿಂದ ಜ.6 ಮತ್ತು 7ರಂದು ಆಯೋಜಿಸಿರುವ ಹಾಸನ ಸಾಹಿತ್ಯೋತ್ಸವ-2025ಕ್ಕೆ ಚನ್ನರಾಯಪಟ್ಟಣ ತಾಲೂಕಿನ ಪರಿಷತ್‌ನ ಆಜೀವ ಸದಸ್ಯರು, ಕನ್ನಡಪರ ಸಂಘಟನೆಗಳು, ಸಾಹಿತಿಗಳು, ಶಿಕ್ಷಕರು, ನೌಕರರು ಸೇರಿದಂತೆ ಎಲ್ಲ ಕನ್ನಡ ಮನಸುಗಳು ಆಗಮಿಸಿ ಸಾಹಿತ್ಯೋತ್ಸವವನ್ನು ಯಶ್ವಸಿಗೊಳಿಸಬೇಕೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಡೇನಹಳ್ಳಿ ಎಚ್.ಎನ್.ಲೋಕೇಶ್ ಮನವಿ ಮಾಡಿದರು.

ಪರಿಷತ್‌ನ ಆಜೀವ ಸದಸ್ಯರು ಸೇರಿ ಯಾರೇ ಕಾರ್ಯಕ್ರಮಕ್ಕೆ ಬರುವಂತಹವರು ತಾಲೂಕು ಘಟಕದ ಪದಾಧಿಕಾರಿಗಳನ್ನಾಗಲಿ, ಇಲ್ಲವೇ ಹೋಬಳಿ ಅಧ್ಯಕ್ಷರನ್ನು ಸಂಪರ್ಕಿಸಿದರೆ ಅವರಿಗೆ ಉಚಿತವಾಗಿ ವಾಹನದ ವ್ಯವಸ್ಥೆ ಮಾಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ಮಾಣಕ್ಕಾಗಿ 10 ಗುಂಟೆ ಜಾಗದ ಬೇಡಿಕೆಯನ್ನು ಶಾಸಕರಿಗೆ ಮುಂದಿಟ್ಟಿದ್ದು, ಇದುವರೆವಿಗೂ ಅವರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ, ಶೀಘ್ರ ಜಾಗ ನೀಡಿದ್ದೇ ಆದಲ್ಲಿ ಪರಿಷತ್ತಿನಿಂದ ಬರುವ ಅನುದಾನ ಸೇರಿ ವಿವಿಧ ಮೂಲಗಳಿಂದ ಅರ್ಥಿನ ನೆರವು ಪಡೆದು ಸುಸಜ್ಜಿತವಾದ ಕನ್ನಡ ಭವನ ನಿರ್ಮಾಣಕ್ಕೆ ಮುಂದಾಗುವುದಾಗಿ ಹೇಳಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಜಲೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ನಡೆಯುವ ಸಾಹಿತ್ಯೋತ್ಸವಕ್ಕೆ ಹೆಚ್ಚಿನ ಜನರು ಬರಬೇಕು ಎಂಬ ಉದ್ದೇಶದೊಂದಿಗೆ ಶಿಕ್ಷಕರಿಗೆ ಜಿಲ್ಲಾಡಳಿತ ಒಒಡಿ ವ್ಯವಸ್ಥೆ ಕಲ್ಪಿಸಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರಿಗಷ್ಟೆ ಒಒಡಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳಾದ ಶಿವನಗೌಡ ಪಾಟೀಲ್, ದಿಂಡಗೂರು ಗೋವಿಂದ್‌ರಾಜ್, ಮುಳ್ಳಕೆರೆ ಪ್ರಕಾಶ್, ಮಲ್ಲೇಶಪ್ಪ, ಯಶೋದಾ ಜೈನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net