

ವಿಜಯಪುರ : ನಗರದ ರಾವೇಂದ್ರ ಕಾಲನಿಯಲ್ಲಿರುವ ಶ್ರೀರಾ ಮುದ್ದು ಪ್ರಾಣಿಗಳ ಚಿಕಿತ್ಸಾ ಹಾಗೂ ಸಲಹಾ ಕೇಂದ್ರದಲ್ಲಿ ಮುದ್ದು ನಾಯಿಗಳಿಗೆ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ಹಾಕುವ ಶಿಬಿರ ಏ. 30 ರಿಂದ ಆರಂಭಗೊಂಡಿದ್ದು, ಮೇ 6 ರವರೆಗೆ ನಡೆಯಲಿದೆ.
ಬೆಂಗಳೂರಿನ ಕರುಣಾ ಪ್ರಾಣಿ ಕಲ್ಯಾಣ ಸಂ, ರೋಟರಿ ಸೇರಿದಂತೆ ಇನ್ನಿತರ ಸಂ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಆಸಕ್ತ ಎಲ್ಲ ಮುದ್ದು ನಾಯಿ ಮಾಲೀಕರು ತಾವು ಸಾಕಿದ ನಾಯಿಗಳಿಗೆ ಲಸಿಕೆ ಹಾಕಿಸಿಕೊಂಡು ಮಾರಕ ರೋಗದಿಂದ ರಕ್ಷಿಸುವಂತೆ ಹಾಗೂ ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಡಾ. ಪ್ರಾಣೇಶ ಜಹಗಿರದಾರ (ಮೊ. 6362746378) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.