ಉಚಿತ ಟ್ಯೂಷನ್ ತರಗತಿಗೆ ಚಾಲನೆ

IMG-20241220-WA0095
Published on

ಸಾಲಿಗ್ರಾಮ : ಪಾಲಕರ ಶ್ರಮವನ್ನು ಮಕ್ಕಳು ಅರ್ಥಮಾಡಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಉಮೇಶ್ ಪೂಜಾರಿ ತಿಳಿಸಿದರು. ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಸಂಸ್ಥೆಯ ಜ್ಞಾನ ವಿಕಾಸ ಯೋಜನೆಯಡಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ 3 ತಿಂಗಳ ಉಚಿತ ಟ್ಯೂಷನ್ ತರಗತಿಗೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮೊದಲ ಹಂತವೇ ಎಸ್‌ಎಸ್ ಎಲ್ ಸಿ ಪರೀಕ್ಷೆ. ಹೆಚ್ಚು ಅಂಕ ಪಡೆದುಕೊಳ್ಳುವ ಮೂಲಕ ಗ್ರಾಮೀಣ ಭಾಗದ ಮಕ್ಕಳು ಮುಂದಿನ ಶಿಕ್ಷಣದ ಮಾರ್ಗವನ್ನು ಸುಗಮಗೊಳಿಸಿಕೊಳ್ಳಬೇಕು ಎಂದರು. ಜ್ಞಾನವಿಕಾಸ ಸಂಸ್ಥೆ ಅಧ್ಯಕ್ಷೆ ಹೇಮಾವತಿ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಬಡ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ವ್ಯವಸ್ಥೆ ನೀಡಿ, ಸಾವಿರಾರು ಬಡ ಮಕ್ಕಳ ವಿದ್ಯಾರ್ಜನೆಗೆ ಅನುಕೂಲ ಮಾಡಿಕೊಡಲಾಗಿದೆ. ಸಾಲಿಗ್ರಾಮ ತಾಲೂಕಿನಲ್ಲೂ ಈ ವ್ಯವಸ್ಥೆ ಮಕ್ಕಳಿಗೆ ಕಲ್ಪಿಸಿ ಕೊಟ್ಟಿದ್ದು, ಪಾಲಕರು ಪೋಷಕರು ತಮ್ಮ ಮಕ್ಕಳಿಗೆ ಉಪಯೋಗ ವಾಗುವಂತೆ ಗಮನ ಹರಿಸಬೇಕು ಎಂದರು.

ಸಂಸ್ಥೆ ಬಡ ಮಕ್ಕಳಿಗೆ ಸ್ಕಾಲರ್ ಶಿಪ್ ವ್ಯವಸ್ಥೆಯನ್ನೂ ಕಲ್ಪಿಸಿದ್ದು, ಗ್ರಾಮೀಣ ಭಾಗದವರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುಳಾ, ಶಿಕ್ಷಕರಾದ ಜ್ಯೋತಿ, ಸುಧಾ, ಜ್ಞಾನ ವಿಕಾಸ ಯೋಜನಾಧಿಕಾರಿ ಸುಜಾತಾ ಮತ್ತು ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net