ಉಚಿತ ಚಿಕಿತ್ಸೆ ಇಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಬದುಕಿನ ಭಾಗವೇ ಆಗಿರುವ ಮೊಬೈಲ್​ ಬಳಕೆಯ ಅಧಿಕ ಸಂಭಾಷಣೆಯಿಂದ ಕಿವಿಯಲ್ಲಿ ಉಂಟಾಗುವ ಶಬ್ದಬಾಧೆ ಟಿನ್ನಿಟಸ್​ (ಕರ್ಣನಾದ) ನಿವಾರಣೆಗೆ ಉಚಿತ ತಪಾಸಣೆ ಮತ್ತು ವೈದ್ಯಕಿಯ ಸಲಹೆಗಳ ಉಚಿತ ಚಿಕಿತ್ಸಾ ಶಿಬಿರವನ್ನು ನಗರದ ಉದಯ ಹಾಸ್ಟೇಲ್​ ರಸ್ತೆಯಲ್ಲಿನ ಆಯುರ್ಧಾಮ ಆಸ್ಪತ್ರೆಯಲ್ಲಿ ಜ. 5ರಂದು ಏರ್ಪಡಿಸಲಾಗಿದೆ.

ಅಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12ರವರೆಗೆ ನಡೆಯುವ ಉಚಿತ ಶಿಬಿರದಲ್ಲಿ ಆಯುರ್ವೇದ ತಜ್ಞ ಡಾ. ಮಹಾಂತಸ್ವಾಮಿ ಹಿರೇಮಠ ಅವರು ಕಿವಿ ತಪಾಸಣೆ ನಡೆಸಿ ಈ ಕರ್ಣನಾದದ ಉಪಶಮನಕ್ಕೆ ವೈದ್ಯಕಿಯ ಸಲಹೆ ಹಾಗೂ ಉಪಕ್ರಮ ತಿಳಿಸಲಿದ್ದಾರೆ. ಈಯರ್​ ಫೋನ್​ ಬಳಸಿ ನಿರಂತರ ಸಂಗೀತ ಆಲಿಸುವುದು, ಸಾಮಾನ್ಯ ಶಬ್ದ ತರಂಗಗಳಿಗಿಂತ ಅಧಿಕ ಶಬ್ದ ಆಲಿಸುವುದರಿಂದ ಟಿನ್ನಿಸನ್​ ತೊಂದರೆ ಉಂಟಾಗುತ್ತಿದ್ದು, ಇದಕ್ಕೆ ಉಚಿತ ಚಿಕಿತ್ಸೆ ಪಡೆಯಲು ಇಚ್ಛಿಸುವವರು ಪಾಲ್ಗೊಳ್ಳಬಹುದು ಎಂದು ಆಸ್ಪತ್ರೆ ಸಂಚಾಲಕಿ ನೀಲಲೋಚನ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net