ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಚಿಕಿತ್ಸೆ

h20-rotary
Published on

ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮತ್ತು ಅಹಮದಾಬಾದ್​ನ ವಿಜಯ ಶಾಲ್ಬಿ ಆಸ್ಪತ್ರೆ ಸಹಯೋಗದಲ್ಲಿ ಇಲ್ಲಿನ ದೇಶಪಾಂಡೆ ನಗರದ ರೋಟರಿ ಶಾಲೆಯಲ್ಲಿ ಭಾನುವಾರ ಉಚಿತ ಮೊಣಕಾಲು ಮತ್ತು ಬೆನ್ನುಮೂಳೆ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.

ಡಾ. ವಿರಾಲ್ ಗುಂಡಾಲಿಯಾ, ಡಾ. ಅಮ್ರಿತ್ ಸಿಂಗ್, ಡಾ. ರಾಜ ಲಿಂಬನಿ ನೇತೃತ್ವದ ವೈದ್ಯಕೀಯ ತಂಡ ಸುಮಾರು 170ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಿದರು.

ನಂತರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಅಧ್ಯಕ್ಷ ಅರವಿಂದ ಕುಬಸದ, ಆರ್ಥಿಕವಾಗಿ ಹಿಂದುಳಿದ ಅನಾರೋಗ್ಯ ಪೀಡಿತರಿಗೆ ಉಚಿತ ಚಿಕಿತ್ಸೆ ನೀಡಲು ನಮ್ಮ ತಂಡ ಸಿದ್ಧವಿದೆ. ಈ ಕುರಿತು ವಿಜಯ ಶಾಲ್ಬಿ ಆಸ್ಪತ್ರೆ ಜತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಮುಂಬರುವ ದಿನಗಳಲ್ಲಿ ವರ್ಷದಲ್ಲಿ ಎರಡು ಬಾರಿ ಉಚಿತ ಶಿಬಿರವನ್ನು ಹುಬ್ಬಳ್ಳಿಯಲ್ಲಿ ಏರ್ಪಡಿಸಲಾಗುವುದು. ಇದನ್ನು ಉತ್ತರ ಕರ್ನಾಟಕಕ್ಕೆ ವಿಸ್ತರಿಸುವ ಹಾಗೂ ಹುಬ್ಬಳ್ಳಿಯಲ್ಲಿ ಸರ್ಜರಿ ನಡೆಸುವ ವ್ಯವಸ್ಥೆಯ ಕುರಿತು ರ್ಚಚಿಸಲಾಗುತ್ತಿದೆ ಎಂದರು.

ಕ್ಲಬ್ ಕಾರ್ಯದರ್ಶಿ ವಸಂತ ಭಸ್ಮೆ, ನಿರ್ದೇಶಕ ಸುರೇಂದ್ರ ಪೋರ್ವಾಲ್, ಕಾರ್ಯಕ್ರಮ ಚೇರ್ಮನ್ ಜಿತೇಶ ಪಾಂಚಾಲ್, ಪದಾಧಿಕಾರಿಗಳಾದ ವಿಕ್ರಂ ಬಿ.ಎಚ್., ವಿಕ್ರಂ ಮುನಿಯಪ್ಪ, ಸಚಿನ್ ಮಹೀಂದ್ರಕರ, ಅಮರ ಸೂಜಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net