ಜಿಲ್ಲಾಸ್ಪತ್ರೆಯಲ್ಲಿಯೇ ವಕ್ರಪಾದಕ್ಕೆ ಉಚಿತ ಚಿಕಿತ್ಸೆ

20200716_172046
Published on

ತುಮಕೂರು: ಹುಟ್ಟಿದ 500 ಮಕ್ಕಳಲ್ಲಿ ಒಬ್ಬರಿಗೆ ಕಾಣಿಸುವ ವಕ್ರಪಾದ ಸಮಸ್ಯೆಗೆ ಜಿಲ್ಲಾಸ್ಪತ್ರೆಯಲ್ಲಿಯೇ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ದೇಶದಲ್ಲಿ ಪ್ರತಿ ವರ್ಷ 50 ಸಾವಿರ ಮಕ್ಕಳು ಈ ಸಮಸ್ಯೆಯ ಜತೆ ಜನಿಸುತ್ತಾರೆ, ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿರುವಾಗಲೇ ಮಗುವಿಗೆ ವಕ್ರಪಾದ ಅಥವಾ ಇ್ಝ್ಠಚಿ ್ಛಟಟಠಿ ಉಂಟಾಗಿರುತ್ತದೆ. ಈ ಸಮಸ್ಯೆ ಒಂದು ಅಥವಾ ಎರಡೂ ಪಾದಗಳಿಗೂ ಉಂಟಾಗಬಹುದು, ಮೊಣಕಾಲಿನಿಂದ ಕೆಳಗೆ ಪಾದಗಳನ್ನೊಳಗೊಂಡು ಒಳ ಭಾಗಕ್ಕೆ ತಿರುಚಿಕೊಂಡಂತಿದ್ದು, ನಡೆಯಲು ಹಾಗೂ ಸಾಮಾನ್ಯ ಚಟುವಟಿಕೆಗೆ ಅಡ್ಡಿಯಾಗಿರುತ್ತದೆ.

ಆತಂಕ ಬೇಡ, ಪರಿಹಾರ ಸಾಧ್ಯ: ವಕ್ರಪಾದ ಉಂಟಾಗಲು ಕಾರಣ ವೈದ್ಯಕೀಯ ಲೋಕಕ್ಕೆ ತಿಳಿದಿಲ್ಲ, ಈ ಸಮಸ್ಯೆಯು ಕೆಲವು ಬಾರಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ನಲ್ಲಿ ಕಾಣಿಸದೆ ಮಗು ಜನಿಸಿದಾಗ ಹೆತ್ತವರು ಖಿನ್ನತೆಗೊಳಗಾಗುವ ಸಾಧ್ಯತೆಯಿದೆ. ಸ್ಕ್ಯಾನಿಂಗ್ ವರದಿಯಲ್ಲಿ ಸಮಸ್ಯೆ ಕಂಡು ಬಂದವರು ಮಗು ತೆಗೆಸಲು ಮುಂದಾಗುತ್ತಾರೆ. ಯಾರೇ ಆಗಲಿ ಆತಂಕಪಡದೆ ಮಗು ಜನಿಸಿದ ಕೂಡಲೇ ಕೀಲು ಮತ್ತು ಮೂಳೆ ವೈದ್ಯರನ್ನು ಸಂಪರ್ಕಿಸಿದಲ್ಲಿ 4 ರಿಂದ 6 ವಾರಗಳೊಳಗೆ ಪರಿಹಾರ ಕಂಡುಕೊಳ್ಳಬಹುದು.

ಫೋನ್ಸಿಟಿ ವಿಧಾನದಿಂದ: ವಕ್ರಪಾದ ಸಮಸ್ಯೆಯನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಫೋನ್ಸಿಟಿ ವಿಧಾನ(ಶಸ್ತ್ರಚಿಕಿತ್ಸೆ ಇಲ್ಲದೆ ವಿಧಾನ)ದಿಂದ ಸರಿಪಡಿಸಲು ಸಾಧ್ಯವಿದೆ. ನಂತರ ವಿಶೇಷ ಬೂಟ್‌ಗಳನ್ನು ನೀಡಲಾಗುವುದು. ಶಸ್ತ್ರಚಿಕಿತ್ಸೆಗೆ ಒಳಗಾಗದ ಕಾರಣ ಮಗುವಿನ ಪಾದದ ಮೇಲೆ ಗಾಯದ ಕಲೆ ಇರುವುದಿಲ್ಲ. ಮಗು ಜನನವಾದ ಕೂಡಲೇ ಸರಿಪಡಿಸದೇ ಹೋದರೆ ಭವಿಷ್ಯದಲ್ಲಿ ಹಲವು ಸಾಧನೆಗೆ ತೊಂದರೆಯಾಗುತ್ತದೆ. ಅಲ್ಲದೆ ಅಂಗ ಊನ ಎಂಬ ಭಾವನೆಯಿಂದ ಸಮಾಜದಲ್ಲಿ ಕೀಳರಿಮೆ ಉಂಟಾಗುವ ಸಾಧ್ಯತೆಯಿದೆ. ತಂದೆ-ತಾಯಂದಿರು ವಕ್ರಪಾದ ಶಾಪವಲ್ಲ ಎಂಬುದನ್ನು ಅರಿತು ವೈದ್ಯತಜ್ಞರಿಂದ ಚಿಕಿತ್ಸೆ ಕೊಡಿಸಿ ಮಕ್ಕಳ ಉತ್ತಮ ಭವಿಷ್ಯಕ್ಕೆ ನಾಂದಿಯಾಗಬೇಕು.

ಸೌಲಭ್ಯಕ್ಕೆ ಜಿಲ್ಲಾಸ್ಪತ್ರೆ ಸಂಪರ್ಕಿಸಿ: ಸಮಸ್ಯೆಯಿಂದ ಜನಿಸಿದ ಮಕ್ಕಳಿಗೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಖಛ್ಟಿಛಿಠಿಟಜಛಿಠಿಛ್ಟಿ ಊಟ್ಠ್ಞಠಿಜಿಟ್ಞ ಸಹಕಾರದಲ್ಲಿ ಕೀಲು ಮತ್ತು ಮೂಳೆ ತಜ್ಞ ಡಾ.ಬಿ.ಎಂ.ಲೋಹಿತ್ ಮತ್ತು ತಂಡ ಪ್ರತಿ ಗುರುವಾರ ಬೆಳಗ್ಗೆ 9 ರಿಂದ ಮದ್ಯಾಹ್ನ 12ರವರೆಗೆ ಉಚಿತವಾಗಿ ಚಿಕಿತ್ಸೆ ನೀಡಲಿದೆ. ಚಿಕಿತ್ಸೆ ಪಡೆದ ಮಕ್ಕಳಿಗೆ ಫೌಂಡೇಷನ್‌ನ ಗೋಪಿ ಬೂಸನಾಥನ್ ಅವರು ಸಂಸ್ಥೆ ವತಿಯಿಂದ ಉಚಿತವಾಗಿ ಶೂ ನೀಡುತ್ತಾರೆ. ಮಕ್ಕಳ ಪಾಲಕರು ಸೇವೆ ಪಡೆಯಲು ಮೊ.6364303131 ಸಂಪರ್ಕಿಸಬಹುದು.

ಜಿಲ್ಲಾಸ್ಪತ್ರೆಯಲ್ಲಿ ವಕ್ರಪಾದಕ್ಕೆ ಉಚಿತ ಚಿಕಿತ್ಸೆ ಲಭ್ಯವಿದ್ದು ಜಿಲ್ಲೆಯ ಜನರು ಸೌಲಭ್ಯ ಪಡೆಯಬಹುದು, ವಕ್ರಪಾದ ಸಂಪೂರ್ಣ ಗುಣಪಡಿಸಲು ಸಾಧ್ಯವಿರುವ ಸಮಸ್ಯೆಯಾಗಿದ್ದು ಮಕ್ಕಳು ಭವಿಷ್ಯದಲ್ಲಿ ತೊಂದರೆ ಅನುಭವಿಸುವುದು ತಪ್ಪಲಿದೆ. ಡಾ.ಟಿ.ಎ.ವೀರಭದ್ರಯ್ಯ ಜಿಲ್ಲಾ ಶಸ್ತ್ರಚಿಕಿತ್ಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net