

ಬೆಳಗಾವಿ : ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷಿತ ಗ್ಯಾರಂಟಿಗಳ ಮೊದಲ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಟಿಕೆಟ್ ಮಹಿಳೆಯರಿಗೆ ವಿತರಿಸುವ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು, ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಅಧಿಕೃತ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಇಷ್ಟು ವರ್ಷಗಳ ಕಾಲ ನಷ್ಟದಲ್ಲಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಇನ್ಮುಂದೆ ಪುನಶ್ಚೇತನಗೊಳ್ಳಲಿದೆ. ಸರ್ಕಾರಕ್ಕೆ ಈ ಆಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕೆ ವಾರ್ಷಿಕ ೬೦ ಸಾವಿರ ಕೋಟಿ ರೂ.ಹೊರೆಯಾಗಲಿದೆ. ಆದರೂ, ಸಿದ್ದರಾಮಯ್ಯನವರ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಅನೇಕ ಕ್ರಮ ಕೈಗೊಳ್ಳಲು ಸಿದ್ದವಿದೆ ಎಂದರು.
ಜಿಲ್ಲೆಯಲ್ಲಿ ಬಸ್ ಸೌಲಭ್ಯವಿಲ್ಲದ 20 ಹಳ್ಳಿಗಳಿಗೂ ಇದರ ಯೋಜನೆ ಲಭಿಸಬೇಕು. ಲೋಕೋಪಯೋಗಿ ಇಲಾಖೆಯಿಂದ ಶೀಘ್ರ ರಸ್ತೆ ದುರಸ್ತಿ ಮಾಡಿ ಅವುಗಳಿಗೂ ವಾಹನ ಸಂಚಾರ ಆರಂಭಿಸಲಾಗುವುದು ಎಂದ ಅವರು,
ಕೇವಲ ಐದು ಗ್ಯಾರಂಟಿ ಅಲ್ಲ, ಹಳೆ ಪಿಂಚಣಿ, ಅಂಗನವಾಡಿ ಕಾರಗಯಕರ್ತೆಯರ ವೇತನ ಹೆಚ್ವಳ, ಎನ್.ಇಪಿ ತೆಗೆದು ಹಳೆ ಶಿಕ್ಷಣ ನೀತಿ ಇನ್ನೂ ನೂರು ಇನ್ನೂರು ಭರವಸೆಗಳನ್ನು ಇಡೇರಿಸುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಶಾಸಕ ಆಸಿಫ್ ಶೇಠ, ಜಿಲ್ಲಾಧಿಕಾರಿ ಡಾ.ನಿತೇಶ ಪಾಟೀಲ, ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಎಸ್ಪಿ ಡಾ.ಸಂಜೀವ ಪಾಟೀಲ ಸೇರಿದಂತೆ ಇತರರಿದ್ದರು.