

ಮಂಡ್ಯ: ಬೆಂಗಳೂರಿನ ನೆಲಮಂಗಲ ತಾಲೂಕು ಅರಿಶಿನಕುಂಟೆಯಲ್ಲಿರುವ ಗ್ರಾಮಾಭಿವೃದ್ಧಿ ಹಾಗೂ ಸ್ವ-ಉದ್ಯೋಗ ತರಬೇತಿ ಸಂಸ್ಥೆ (ರುಡ್‌ಸೆಟ್)ಯಿಂದ ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ವಿದ್ಯಾವಂತ ನಿರುದ್ಯೋಗ ಯುವಕ/ಯುವತಿಯರಿಗಾಗಿ ವಿವಿಧ ಕೌಶಲ ಉಚಿತ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮೇ 15 ರಿಂದ ಜೂ.1ರವರೆಗೆ ದ್ವಿಚಕ್ರ ವಾಹನ ದುರಸ್ತಿ, ಮೇ 13 ರಿಂದ ಮೇ 22ರವರೆಗೆ ಹಪ್ಪಳ, ಉಪ್ಪಿನಕಾಯಿ, ಮಸಾಲ ಪೌಡರ್ ತಯಾರಿಕೆ, ಮೇ 15ರಿಂದ ಮೇ 24ರವರೆಗೆ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆಯ ತರಬೇತಿ ನೀಡಲಾಗುವುದು.
ಕನ್ನಡ ಭಾಷೆ ಓದಲು ಹಾಗೂ ಬರೆಯಲು ಬರುವ 18 ರಿಂದ 45 ವಯೋಮಾನದವರು ತರಬೇತಿ ಪಡೆಯಬಹುದು. ಆಧಾರ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ತರಬೇತಿ ಸಮಯದಲ್ಲಿ ಊಟ ಹಾಗೂ ವಸತಿ ವ್ಯವಸ್ಥೆ ನೀಡಲಾಗುವುದು. ಜತೆಗೆ ಸರ್ಕಾರದ ಸಾಲ ಸೌಲಭ್ಯ, ಸಬ್ಸಿಡಿ, ಬ್ಯಾಂಕ್‌ನಿಂದ ಅಥವಾ ಉದ್ಯೋಗ ಮಾಡಲು ನೀಡಲಾಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಪ್ರಮಾಣ ಪತ್ರವನ್ನು ನೀಡಲಾಗುವುದು. ಮಾಹಿತಿಗಾಗಿ ಮೊ.ಸಂ 8884554510, 9241482541 ಅಥವಾ 9113880324 ಅನ್ನು ಸಂಪರ್ಕಿಸಬಹುದು ಪ್ರಕಟಣೆ ತಿಳಿಸಿದೆ.