ಮೈಸೂರು: ಜ್ಞಾನಬುತ್ತಿ ಸಂಸ್ಥೆಯಿಂದ ನವದೆಹಲಿಯ ವಿಶ್ವವಿದ್ಯಾಲಯದ ಧನಸಹಾಯ ಆಯೋಗ (ಯುಜಿಸಿ) ಜನವರಿ ತಿಂಗಳಿನಲ್ಲಿ ನಡೆಸಲಿರುವ ಕಾಲೇಜು ಸಹಾಯಕ ಪ್ರಾಧ್ಯಾಪಕರು ಮತ್ತು ಕಿರಿಯ ಶಿಷ್ಯವೇತನ ಸಂಶೋಧನಾ ಸಹಾಯಕರ ಅರ್ಹತಾ (ಯುಜಿಸಿ-ಎನ್‌ಇಟಿ) ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುವುದು.
ಆಸಕ್ತರು ಡಿ.7ರೊಳಗೆ ನಿತ್ಯ ಸಂಜೆ 5.30ರಿಂದ 7.30ರವರೆಗೆ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಆವರಣದಲ್ಲಿರುವ ಜ್ಞಾನಬುತ್ತಿ ಸಂಸ್ಥೆಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಮಾಹಿತಿಗೆ ಸಿ.ಕೆ.ಕಿರಣ್‌ಕೌಶಿಕ್(9972830857) ಕೆ.ವೈ ನಾಗೇಂದ್ರ (8296788251) ಸಂಪರ್ಕಿಸಬಹುದು ಎಂದು ಸಂಸ್ಥೆಯ ಕಾರ್ಯದರ್ಶಿ ಎಚ್.ಬಾಲಕೃಷ್ಣ ಹೇಳಿಕೆಯಲ್ಲಿ ತಿಳಿಸಿದ್ದಾರೆ.