ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ರಂಗ ಶಿಬಿರ

7S7S7S7S
Published on

ಸಿಂದಗಿ: ಸರ್ಕಾರಿ ಶಾಲಾ ಮಕ್ಕಳಿಗಾಗಿ ಇಲ್ಲಿನ ಮಾಧ್ಯಮರಂಗ ೌಂಡೇಷನ್​ದಿಂದ ಮುಂಬರುವ ಅ.5 ರಿಂದ ಅ.20 ರವರೆಗೆ ತಹಸೀಲ್ದಾರ್​ ಕಚೇರಿ ಆವರಣದ ಸಿಶಕ್ತಿ ಭವನದಲ್ಲಿ ಉಚಿತ ರಂಗ ಶಿಬಿರ ಆಯೋಜಿಸಿದೆ.

5ನೇ ತರಗತಿಯಿಂದ 9ನೇ ತರಗತಿ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದಾಗಿದೆ. ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ 5.30 ರವರೆಗೆ ಮಕ್ಕಳಿಗೆ ಅಭಿನಯ, ನೃತ್ಯ, ಹಾಡು, ರೂಪಕ ಸೇರಿ ರಂಗಭೂಮಿಯ ವಿವಿಧ ಚಟುವಟಿಕೆಗಳನ್ನು ಕಲಿಸಿಕೊಡಲಾಗುತ್ತದೆ.

ಇಚ್ಛಿತ ವಿದ್ಯಾರ್ಥಿಗಳು ಫೌಡೇಷನ್​ ಅಧ್ಯ ನಾಗೇಶ ತಳವಾರ ಮೊ. 9035392009 ಅವರನ್ನು ಸಂಪರ್ಕಿಸಲು ಕೋರಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net