ಚುನಾವಣಾ ಕಾರ್ಯದಿಂದ ಪಿಡಿಒ ಮುಕ್ತಿಗೊಳಿಸಿ

sri gp
ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾಮರಿಯಪ್ಪ್ಪ ನಾಯ್ಕ, ಟಿ.ಕೆ.ಭಾಗ್ಯಾ ಅವರು ಶೃಂಗೇರಿ ಗ್ರೇಡ್-2 ತಹಸೀಲ್ದಾರ್ ಶಂಕರ್‌ಗೆ ಮನವಿ ಸಲ್ಲಿಸಿದರು. ತ್ರಿಮೂರ್ತಿ, ಶಾಮಣ್ಣ, ಮಂಜುನಾಥ್ ಇತರರಿದ್ದರು.
Published on

ಶೃಂಗೇರಿ: ಮೆಣಸೆ ಗ್ರಾಪಂ ವ್ಯಾಪ್ತಿಯಲ್ಲಿ ಬರನಿರ್ವಹಣೆ ಇತ್ಯಾದಿ ಗಂಭೀರ ಸಮಸ್ಯೆ ಇರುವ ಕಾರಣ ಪಿಡಿಒ ನಾಗಭೂಷಣ್ ಅವರನ್ನು ಚುನಾವಣಾ ಕೆಲಸದಿಂದ ಮುಕ್ತಿಗೊಳಿಸಬೇಕು ಎಂದು ಕೋರಿ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ ನಾಯ್ಕ ಹಾಗೂ ಸದಸ್ಯರು ತಾಲೂಕು ಕಚೇರಿ ಗ್ರೇಡ್-2 ತಹಸೀಲ್ದಾರ್ ಶಂಕರ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಸಂಧ್ಯಾ ಮರಿಯಪ್ಪ ನಾಯ್ಕ ಮಾತನಾಡಿ, ಗ್ರಾಪಂಗಳಲ್ಲಿ ಬರ ಪರಿಸ್ಥಿತಿ ನಿರ್ವಹಣೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ಜನಸಾಮಾನ್ಯರ ಅಹವಾಲುಗಳನ್ನು ಸ್ವೀಕರಿಸಿ ಕ್ಷಿಪ್ರ ಗತಿಯಲ್ಲಿ ಪರಿಹಾರ ನೀಡುವಲ್ಲಿ ಪಿಡಿಒ ಕಾರ್ಯನಿರ್ವಹಿಸಬೇಕಿದೆ. ಪಿಡಿಒ ನಾಗಭೂಷಣ್ ಅವರನ್ನು ಚುನಾವಣೆ ಕಾರ್ಯಕ್ಕಾಗಿ ಬೇಗಾರು ಚೆಕ್‌ಪೋಸ್ಟ್‌ಗೆ ನೇಮಕ ಮಾಡಲಾಗಿದೆ. ಕಾರ್ಯದರ್ಶಿ ಗ್ರೇಡ್-1 ಅವರು ಧರೇಕೊಪ್ಪ ಗ್ರಾಪಂಗೆ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಚುನಾವಣೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮೆಣಸೆ ಗ್ರಾಪಂ ದೊಡ್ಡ ಪಂಚಾಯಿತಿ ಆದ ಕಾರಣ ಕೂಡಲೇ ಪಿಡಿಒ ಅವರನ್ನು ಚುನಾವಣಾ ಕರ್ತವ್ಯದಿಂದ ಮುಕ್ತಿಗೊಳಿಸಬೇಕು ಎಂದು ಮನವಿ ಮಾಡಿದರು. ಗ್ರಾಪಂ ಉಪಾಧ್ಯಕ್ಷೆ ಟಿ.ಕೆ.ಭಾಗ್ಯಾ, ಸದಸ್ಯರಾದ ತ್ರಿಮೂರ್ತಿ, ಶಾಮಣ್ಣ, ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net