ಶಿಕ್ಷಕರನ್ನು ಚುನಾವಣಾ ಕಾರ್ಯದಿಂದ ಮುಕ್ತಗೊಳಿಸಿ

Free teachers from election work
ಸಿದ್ದಾಪುರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು. ಸತೀಶ ಹೆಗಡೆ, ನಾಗರಾಜ ಮಡಿವಾಳ, ಗುರುರಾಜ ನಾಯ್ಕ, ನಮೃತಾ ಪೈ, ರಾಮನಾಥ ನಾಯ್ಕ, ಜಿ .ಆರ್. ಹೆಗಡೆ, ಜೆ.ಎನ್ ಗೌಡ, ಎಂ.ಎಸ್. ಹೆಗಡೆ ಇತರರಿದ್ದರು.
Published on

ಸಿದ್ದಾಪುರ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಸಿದ್ದಾಪುರ ತಾಲೂಕಿನಲ್ಲಿ ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಶಿಕ್ಷಕರನ್ನು ಸದರಿ ಕಾರ್ಯದಿಂದ ಬಿಡುಗಡೆಗೊಳಿಸಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಅವಕಾಶ ಮಾಡಿಕೊಡಬೇಕೆಂದು ತಹಸೀಲ್ದಾರ್‌ಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಸೂಚನೆಯಂತೆ ಶಿಕ್ಷಕರನ್ನು ಚುನಾವಣಾ ಕರ್ತವ್ಯದಿಂದ ಮುಕ್ತಗೊಳಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂಬ ಸೂಚನೆಯನ್ನು ಉಲ್ಲೇಖಿಸಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಮನವಿಸಲ್ಲಿಸಿದರು. ತಹಸೀಲ್ದಾರ್ ಎಂ.ಆರ್ ಕುಲಕರ್ಣಿ ಮನವಿ ಸ್ವೀಕರಿಸಿದರು. ಚುನಾವಣಾ ವಿಭಾಗದ ಶಿರಸ್ತೆದಾರ ಚಂದನ ಚಂದ್ರಗುತ್ತಿ ಹಾಜರಿದ್ದರು.

ಬಿಇಒ ಕಚೇರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಎಚ್. ನಾಯ್ಕ ಮನವಿ ಸ್ವೀಕರಿಸಿದರು. ವ್ಯವಸ್ಥಾಪಕ ಎಂ.ಬಿ. ನಾಯ್ಕ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಸತೀಶ ಹೆಗಡೆ ಮನವಿ ಸಲ್ಲಿಸಿ ಮಾತನಾಡಿದರು. ಕಾರ್ಯದರ್ಶಿ ಗುರುರಾಜ ನಾಯ್ಕ, ಉಪಾಧ್ಯಕ್ಷ ನಾಗರಾಜ ಮಡಿವಾಳ, ನೌಕರರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ರಾಮನಾಥ ನಾಯ್ಕ, ನಮ್ರತಾ ಪೈ, ಜಿ .ಆರ್. ಹೆಗಡೆ, ಜೆ.ಎನ್. ಗೌಡ, ಶ್ರೀಕಾಂತ ನಾಯ್ಕ, ರಾಜು ನಾಯ್ಕ, ಎಂ.ಎಸ್. ಹೆಗಡೆ, ಬಾಬು ನಾಯ್ಕ, ಸರಸ್ವತಿ ಸಿದ್ದೇರ, ಕಲಾವತಿ ಹೆಗಡೆ, ವೀರಭದ್ರ ನಾಯ್ಕ, ಮನೋಹರ್ ಗುನಗಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net