ಉಚಿತ ಟೈಲರಿಂಗ್ ತರಬೇತಿ ಶಿಬಿರ ಸಂಪನ್ನ

seva bharathi
Published on

ಕೊಕ್ಕಡ: ಸೇವಾಭಾರತಿ ಕನ್ಯಾಡಿ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ, ಶ್ರೀರಾಮ ಸೇವಾ ಟ್ರಸ್ಟ್ ಕೊಕ್ಕಡ, ಶ್ರೀ ದುರ್ಗಾ ಮಾತೃಮಂಡಳಿ ಕನ್ಯಾಡಿ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ 28ನೇ ಟೈಲರಿಂಗ್ ತರಬೇತಿ ಉಚಿತ ಶಿಬಿರ ಸಮಾರೋಪ ಗುರುವಾರ ಕೊಕ್ಕಡದಲ್ಲಿ ನಡೆಯಿತು.

ಶ್ರೀಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಕೃಷ್ಣ ಭಟ್, ಸೇವಾಭಾರತಿ ಅಧ್ಯಕ್ಷೆ ಹಾಗೂ ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರಿ ಸಂಘದ ಸಿಇಒ ಸ್ವರ್ಣಗೌರಿ, ಟೈಲರಿಂಗ್ ತರಬೇತುದಾರೆ ಗೀತಾ ಮಾತನಾಡಿದರು. ಶ್ರೀ ದುರ್ಗಾ ಮಾತೃ ಮಂಡಳಿ ಹಾಗೂ ಕೊಕ್ಕಡ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಸೇವಭಾರತಿ ಸಂಸ್ಥೆಗೆ 2 ಟೈಲರಿಂಗ್ ಮಷಿನ್ ಹಸ್ತಾಂತರಿಸಲಾಯಿತು.

ಗೀತಾ ಹಾಗೂ ಪುರುಷೋತ್ತಮ ಅವರನ್ನು ಗೌರವಿಸಲಾಯಿತು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಕುಶಾಲಪ್ಪ ಗೌಡ, ಉಪಾಧ್ಯಕ್ಷ ಈಶ್ವರ್ ಭಟ್ ಹಿತ್ತಿಲು, ಬಾಲಕೃಷ್ಣ, ಬಬಿತಾ, ಸುಮತಿ ಉಪಸ್ಥಿತರಿದ್ದರು.

ಕನ್ಯಾಡಿ ಸೇವಾಭಾರತಿಯ ಅಕೌಂಟೆಂಟ್ ಅಕ್ಷತಾ ಸ್ವಾಗತಿಸಿದರು. ಕೋ ಆರ್ಡಿನೇಟರ್ ಸುಮಾ ಕಾರ್ಯಕ್ರಮ ನಿರೂಪಿಸಿದರು. ಪ್ರಮೀಳಾ ವಂದಿಸಿದರು. ಒಟ್ಟು 63 ಮಂದಿ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net