

ಮಂಡ್ಯ: ಹಲವು ವಿಶೇಷತೆಗಳ ಮೂಲಕವೇ ಗಮನಸೆಳೆದಿರುವ ತಾಲೂಕಿನ ಉಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಏ.12ರಿಂದ 24ರವರೆಗೆ ಆರರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಬೇಸಿಗೆ ಶಿಬಿರ ಆಯೋಜಿಸಲಾಗಿದೆ.
ಶಾಲೆ ಹಾಗೂ ಗ್ರಾಪಂ ಡಿಜಿಟಲ್ ಗ್ರಂಥಾಲಯದಲ್ಲಿ ನಡೆಯಲಿರುವ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಅಬಾಕಸ್, ಚೆಸ್, ವಿಜ್ಞಾನಗಳ ಪ್ರಯೋಗ(ಆಕಾಶ ವೀಕ್ಷಣೆ), ಪ್ರಥಮ ಚಿಕಿತ್ಸೆ, ಸ್ಪೋಕನ್ ಇಂಗ್ಲೀಷ್, ಮಾನಸಿಕ ಸಾಮರ್ಥ್ಯ, ಚಿತ್ರಕಲೆ, ಪೇಪರ್ ಕ್ರ್‌ಟಾ, ಈಜು, ಯೋಗ/ಧ್ಯಾನ, ಗ್ರಾಮೀಣ ಕ್ರೀಡೆ, ಪವಾಡ ರಹಸ್ಯ, ಜನಸ್ನೇಹಿ ಪೊಲೀಸ್, ವಿನೋದ ಗಣಿತ, ಕಂಪ್ಯೂಟರ್ ಶಿಕ್ಷಣ, ಕರಾಟೆ, ಅರ್ಚರಿ, ಸಂಗೀತ ಚಟುವಟಿಕೆ ಇರಲಿದೆ. 12ರಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಶಿಬಿರ ಉದ್ಘಾಟಿಸಲಿದ್ದಾರೆ.
ಪ್ರವೇಶ ಉಚಿತವಾಗಿರುವುದರ ಜತೆಗೆ ವ್ಯಾಪ್ತಿಯ ನಿರ್ಬಂಧವಿಲ್ಲ. ಬೇರೆ ಕಡೆಯಿಂದಲೂ ವಿದ್ಯಾರ್ಥಿಗಳು ಆಗಮಿಸಿ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಮಾಹಿತಿಗೆ ಮುಖ್ಯಶಿಕ್ಷಕ ನಾಗರಾಜು ಮೊ.ಸಂ 9844298931 ಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.