

ಕೋಟ: ಕಟ್ಕೆರೆ ಯುವಶಕ್ತಿ ಯುವಕ ಮಂಡಲ ಆಶ್ರಯದಲ್ಲಿ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ 5 ದಿನಗಳ ಕಾಲ ಅರಿವು- ಒಂದಿಷ್ಟು ಜ್ಞಾನದ ಹರಿವು ಮಕ್ಕಳ ಉಚಿತ ಬೇಸಿಗೆ ಶಿಬಿರ ನಡೆಯಿತು. ಸಂಘದ ಅಧ್ಯಕ್ಷ ದಯಾನಂದ ಶೆಟ್ಟಿ ಕಟ್ಕೆರೆ ಅಧ್ಯಕ್ಷತೆ ವಹಿಸಿದ್ದರು.
ನಾಗಪಾತ್ರಿ ರಾಜಶೇಖರ್ ಹೊಳ್ಳ ಕಟ್ಕೆರೆ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ಸುಬೋದ್ ಹೆಗ್ಡೆ ಕಟ್ಕೆರೆ ಹಾಗೂ ದೇವಸ್ಥಾನದ ಗೋಪಾಲ ಮಡಿವಾಳ ಕಟ್ಕೆರೆ ಶುಭಾಶಂಸನೆಗೈದರು. ಸಂಪನ್ಮೂಲ ವ್ಯಕ್ತಿಗಳಾಗಿ ನರೇಂದ್ರ ಕುಮಾರ್ ಕೋಟ ಭಾಗವಹಿಸಿದರು.
ಸಂಘದ ಗೌರವಾಧ್ಯಕ್ಷ ಗಣೇಶ್ ಶೆಟ್ಟಿ ಕಟ್ಕೆರೆ ಉಪಸ್ಥಿತರಿದ್ದರು. ಶಿಬಿರದ ಸಂಯೋಜಕರಾದ ವಿಖ್ಯಾತ್ ಕಂಡ್ಲೊರ್ ನಿರೂಪಿಸಿದರು.
5 ದಿನಗಳ ಈ ಶಿಬಿರದಲ್ಲಿ ಸ್ಥಳೀಯ 98 ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆದರು.