ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದಿಂದ ಉಚಿತ ಬೇಸಿಗೆ ಶಿಬಿರ

Published on

ವಿಜಯಪುರ : ಸಮಗ್ರ ಶಿಕ್ಷಣ ಮತ್ತು ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ಸಹಯೋಗದಲ್ಲಿ ನಗರದ ಜಿಪಂ ಕಚೇರಿ ಬಳಿಯ ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರದಲ್ಲಿ ಏ. 1 ರಿಂದ ಒಂದು ತಿಂಗಳುಗಳ ಕಾಲ 5ನೇ ತರಗತಿಯಿಂದ 10ನೇ ತರಗತಿಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಉಚಿತ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ.

ಶಿಬಿರವು ಪ್ರತಿದಿನ ಬೆಳಗ್ಗೆ 8.30 ರಿಂದ ಮಧ್ಯಾಹ್ನ 11.30 ರವರೆಗೆ ನಡೆಯಲಿದೆ.

ಶಿಬಿರಕ್ಕೆ ಸೇರುವ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಮತ್ತು ಮಧ್ಯಾಹ್ನದ ಬಿಸಿ ಊಟ ನೀಡಲಾಗುವುದು.

ಶಿಬಿರದಲ್ಲಿ ಇಂಜಿನಿಯರಿಂಗ್ ಬೇಸ್ಡ್ ಲರ್ನಿಂಗ್, ಕಲೆ ಮತ್ತು ಕ್ರೀಡೆಗೆ ಸಂಬಂಧಿಸಿದ ಚಟುವಟಿಕೆಗಳ ಉಚಿತ ತರಬೇತಿ ನೀಡಲಾಗುವುದು. ಜತೆಗೆ ವಿಜ್ಞಾನದ ಚಟುವಟಿಕೆಗಳು, ಕಂಪ್ಯೂಟರ್ ಶಿಕ್ಷಣ, ಎಲೆಕ್ಟ್ರಾನಿಕ್ಸ್, ರೋಬೋಟಿಕ್, ಮೆಕ್ಯಾನಿಕ್ಸ್ ಮತ್ತು ಸ್ಪೋಕನ್ ಇಂಗ್ಲಿಷ್ ತರಗತಿಗಳು ಕೂಡ ನಡೆಯಲಿವೆ.

ಬಿರದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಬಹುಮಾನ ವಿತರಿಸಲಾಗುವುದು.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಚಂದ್ರಶೇಖರ ಅಣಮಿ ಮೊ. 7892322129, ಆಕಾಶ ಮೊ. 8123401156, ಕೃಷ್ಣಾ ಮೊ. 8951311236 ಮತ್ತು ಸಂತೋಷ ಮೊ. 9730457216 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆಯು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net