

ಕುಣಿಗಲ್: ಪಟ್ಟಣದ ಸ್ವಚ್ಛತೆಗೆ ಜೀವ ಪಣಕ್ಕೆ ಇಟ್ಟು ಶ್ರಮಿಸುತ್ತಿರುವ ಪೌರ ಕಾರ್ಮಿಕರಿಗೆ ಇನ್ನು ಎರಡು ತಿಂಗಳಲ್ಲಿ ಉಚಿತ ನಿವೇಶನ ವಿತರಣೆ ಮಾಡುವುದಾಗಿ ಶಾಸಕ ಡಾ.ಎಚ್.ಡಿ.ರಂಗನಾಥ್ ಭರವಸೆ ನೀಡಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ತಾಲೂಕಿನ ಗವಿಮಠದ ಬಳಿ ಪೌರ ಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡಲು ಮೂರು ಎಕರೆ ಜಾಗ ಮಂಜೂರಾಗಿದ್ದು, ಈ ಜಾಗಕ್ಕೆ ರಸ್ತೆ ನಿರ್ಮಾಣ ಮಾಡಲು ರೈತರು ಅಡ್ಡಿ ಪಡಿಸುತಿದ್ದಾರೆ. ನಾಕಾಸೆ ರಸ್ತೆ ತೆಗೆ ರೈತರ ಮನವೊಲಿಸಿ ರಸ್ತೆ ನಿರ್ಮಾಣ ಮಾಡಲು ತಹಸೀಲ್ದಾರ್ ಅವರಿಗೆ ಸೂಚನೆ ನೀಡಲಾಗಿದೆ. ಒಂದು ವಾರದಲ್ಲಿ ಈ ಸಮಸ್ಯೆ ಬಗೆಹರಿಸದರೆ ಲೇಔಟ್ ನಿರ್ಮಾಣಕ್ಕೆ ಮುಂದಾಗಲಾಗುವುದು. ಇದಕ್ಕಾಗಿ 43 ಲಕ್ಷ ರೂ. ಮೀಸಲಾರಿಸಲಾಗಿದೆ. ಎರಡು ತಿಂಗಳಲ್ಲಿ 100 ನಿವೇಶನ ಹಂಚಿಕೆ ಮಾಡುವುದು ಖಚಿತ ಎಂದು ತಿಳಿಸಿದರು.
ಹೊಸದಾಗಿ 19 ಮಂದಿ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ಕಾರ್ಮಿಕರಿಗೆ ವೇತನ ಹೆಚ್ಚಳ ಮಾಡಬೇಕೆಂದು ಮನವಿ ಮಾಡಿದ್ದಾರೆ. ಬೇರೆ ಬೇರೆ ಪುರಸಭೆಗಳಲ್ಲಿ ನೀಡುತ್ತಿರುವ ವೇತನ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪೌರ ಕಾರ್ಮಿಕರು ಮಾಡುತ್ತಿರುವ ಕೆಲಸದಲ್ಲೆ ಆರೋಗ್ಯ ಸಮಸ್ಯೆ ಎದುರಿಸಬೇಕಾಗಿದೆ. ಈ ರೀತಿ ಇರುವಾಗ ಇದರ ತೆಗೆ ಪೌರ ಕಾರ್ಮಿಕರು ದುಷ್ಟಚಟಗಳಿಗೆ ದಾಸರಾಗಿದ್ದಾರೆ. ಈ ಕೆಲಸ ಮಾಡಬೇಕಾಗದರೇ ಕುಡಿಯಲೇ ಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ಬೇರೆ ವೃತ್ತಿಗೆ ನೀಡುವಷ್ಟೇ ಗೌರವ ನಿಮಗೂ ಕೋಡುತ್ತೇನೆ ಇಲ್ಲಿ ಯಾವುದೂ ಕೀಳಲ್ಲ. ಮೊದಲು ದುಷ್ಟಚಟಗಳನ್ನು ಬಿಡಿ ನಿಮ್ಮ ಆರೋಗ್ಯ ಕಪಾಡಿಕೊಳ್ಳಿ ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷೆ ಮಂಜುಳಾ ನಾಗರಾಜು, ಉಪಾಧ್ಯಕ್ಷ ಶ್ರೀನಿವಾಸ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಎಂ.ಅಶ್ಮಾ, ಸದಸ್ಯರಾದ ರಂಗಸ್ವಾಮಿ, ಅರುಣ್ ಕುಮಾರ್, ಎಸ್.ಕೆ.ನಾಗೇಂದ್ರ, ಮಂಜುಳಾ ರಂಗಪ್ಪ, ದೇವರಾಜು, ವಿಜಯಲಕ್ಷ್ಮೀ ನಾಮ ನಿರ್ದೇಶಿತ ಸದಸ್ಯರಾದ ಶಿವಕುಮಾರ್, ರೆಹಮಾನ್, ಪದ್ಮಾವತಿ, ಸತೀಶ್, ಪುರಸಭೆ ಮುಖ್ಯಾಕಾರಿ ಕಷ್ಣಪ್ಪ ಮತ್ತಿತರರು ಹಾಜರಿದ್ದರು.
25 ಸಾವಿರ ನಗದು ಬಹುಮಾನ:ಪಟ್ಟಣದಲ್ಲಿ ಅತ್ಯತ್ತಮವಾಗಿ ಕೆಲಸ ನಿರ್ವಹಿಸುವ ಪೌರ ಕಾರ್ಮಿಕನಿಗೆ ಪ್ರತಿವರ್ಷ 25 ಸಾವಿರ ನಗದು ಬಹುಮಾನ ನೀಡಿ ಗೌರಿಸಲಾಗುವುದು ಎಂದು ಘೋಷಣೆ ಮಾಡಿದ ಶಾಸಕರು, ಸ್ವಚ್ಛತೆ ವಿಚಾರದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುವ ಪೌರ ಕಾರ್ಮಿಕರನ್ನು ಪುರಸಭೆ ಸದಸ್ಯರು, ಸಾರ್ವಜನಿಕರು ಹಾಗೂ ಪತ್ರಕರ್ತರು ಗುರುತಿಸಿದರೆ ಅಂತವರಿಗೆ ಈ ನಗದು ಬಹುಮಾನ ನೀಡಲಾಗುವುದೆಂದು ಶಾಸಕರು ತಿಳಿಸಿದರು.