10 ರಿಂದ ಪಿತ್ತವಿಕಾರ ಸಮಸ್ಯೆಗೆ ಉಚಿತ ತಪಾಸಣೆ

Siddheshwar organization expresses anger against Mushrif
Shivasharane Hemaraddi Mallamma Jayanti
Published on

ವಿಜಯಪುರ: ಇಲ್ಲಿನ ಬಾಲಕೋಟೆ ರಸ್ತೆಯಲ್ಲಿನ ಬಿಎಲ್​ಡಿಇ ಸಂಸ್ಥೆಯ ಎವಿಎಸ್​ ಆಯುರ್ವೇದಿಕ್​ ಮಹಾವಿದ್ಯಾಲಯದಲ್ಲಿ ಕಾಯ ಚಿಕಿತ್ಸಾ ವಿಭಾಗದ ವತಿಯಿಂದ ಮಾ.10 ರಿಂದ ಮಾ. 12 ರ ವರೆಗೆ ಪಿತ್ತವಿಕಾರ ಅಥವಾ ಅಜೀರ್ಣತೆ ಸಮಸ್ಯೆಯಿಂದ ಬಳಲುವವರಿಗೆ ಉಚಿತ ತಪಾಸಣೆ ಶಿಬಿರ ನಡೆಯಲಿದೆ.

ಅತಿಸಾರ, ಐಬಿಎಸ್​, ಅತಿ ಭೇದಿ, ಮಲಬದ್ಧತೆ, ಹೊಟ್ಟೆನೋವು, ಹೊಟ್ಟೆ ಉಬ್ಬರ, ಆಮ್ಲ ಪಿತ್ತ, ಹೊಟ್ಟೆ ಉರಿ, ವಾಕರಿಕೆ, ಎದೆ ಉರಿ, ಅಜೀರ್ಣ ಕ್ರಿಯೆ, ಸಹಜವಾಗಿ ಮಲವಿಸರ್ಜನೆ ನಂತರ ಕಾಣಿಸಿಕೊಳ್ಳುವ ಹೊಟ್ಟೆನೋವು ಸಮಸ್ಯೆಯಿಂದ ಬಳಲುವ ರೋಗಿಗಳು ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಕೊಳ್ಳಬಹುದಾಗಿದೆ.

ಮಾಹಿತಿಗೆ ಮೊ. 9343877670 ಮತ್ತು 9513397413ಗೆ ಸಂಪರ್ಕಿಸುವಂತೆ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net