ಪ್ರಾಮಾಣಿಕತೆ, ಸತ್ಯನಿಷ್ಠೆ ರೂಢಿಸಿಕೊಳ್ಳಿ...

Yakshagana
Published on

ವಿದ್ಯಾರ್ಥಿಗಳಿಗೆ ವಿಶ್ವನಾಥ ಶೆಣೈ ಕಿವಿಮಾತು

ವಿಜಯವಾಣಿ ಸುದ್ದಿಜಾಲ ಉಡುಪಿ

ವಿದ್ಯಾರ್ಥಿ ಜೀವನದಲ್ಲಿರುವ ನಿಮ್ಮನ್ನು ಸಂಸ್ಥೆಯು ಉತ್ತಮವಾಗಿ ನೋಡಿಕೊಂಡು ಬರುತ್ತಿದೆ. ಅದರಂತೆ ತಾವುಗಳೂ ಸಹ ಶಿಕ್ಷಣದೊಂದಿಗೆ ಜೀವನದಲ್ಲಿ ಪ್ರಾಮಾಣಿಕತೆ, ಸತ್ಯನಿಷ್ಠೆ, ಕೌಶಲ, ದಕ್ಷತೆ ಬೆಳೆಸಿಕೊಂಡು ಭವ್ಯಭಾರತದ ಉಜ್ವಲ ಭವಿಷ್ಯದ ನೇತಾರರಾಗಬೇಕು ಎಂದು ವಿಶ್ವಸಂಸ್ಕೃತಿ ಪ್ರತಿಷ್ಠಾನದ ಸಂಸ್ಥಾಪಕ, ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಸದಸ್ಯ ವಿಶ್ವನಾಥ ಶೆಣೈ ಕಿವಿಮಾತು ಹೇಳಿದರು.

ಉಡುಪಿಯ ಇಂದ್ರಾಳಿಯಲ್ಲಿರುವ ಯಕ್ಷಗಾನ ಕೇಂದ್ರದಲ್ಲಿ ಜೂನ್ 28ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರದ 30 ವಿದ್ಯಾರ್ಥಿಗಳಿಗೆ ನೋಟ್​ಬುಕ್​ ಹಾಗೂ ಕಲಿಕೆಗೆ ಬೇಕಾಗುವ ಇನ್ನಿತರ ಪರಿಕರಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿದರು.

ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ ಶೆಟ್ಟಿ ಮಾತನಾಡಿ, ಕೇಂದ್ರ ಸ್ಥಾಪನೆ ಆಗುವಲ್ಲಿಂದ ಆರಂಭಿಸಿ ಇಲ್ಲಿಯವರೆಗೂ ವಿಶ್ವನಾಥ ಶೆಣೈ ಅವರು ಎಲ್ಲ ರೀತಿಯಿಂದಲೂ ಸಹಕರಿಸುತ್ತಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.

ಯಕ್ಷಗಾನ ಕೇಂದ್ರದ ಗುರುವೃಂದ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net