ಉಚಿತ ಪ್ರಕೃತಿ ಚಿಕಿತ್ಸೆ ಸಲಹಾ ಶಿಬಿರ

New nature new
Published on

ಹುಬ್ಬಳ್ಳಿ : ಇಲ್ಲಿಯ ಗೋಕುಲ ರಸ್ತೆಯ ಡಾ. ಕೆ. ಎಸ್. ಶರ್ಮಾ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಸಂಸ್ಥೆಯಲ್ಲಿ ಜೂ. 8ರಂದು ಮಧ್ಯಾಹ್ನ 12 ಗಂಟೆಗೆ ಉಚಿತ ಪ್ರಕೃತಿ ಚಿಕಿತ್ಸೆ ಸಲಹಾ ಶಿಬಿರ ಏರ್ಪಡಿಸಲಾಗಿದೆ.

12 ರಿಂದ 1.30 ರವರೆಗೆ ಪ್ರಕೃತಿ ಚಿಕಿತ್ಸೆಯ ಮಹತ್ವದ ಕುರಿತು ತಜ್ಞರಿಂದ ಉಪನ್ಯಾಸ ನಡೆಯಲಿದೆ. ನಂತರ ಆರೋಗ್ಯ ಸಮಸ್ಯೆಗಳಿಗೆ ಉಚಿತ ಸಲಹೆ ನೀಡಲಾಗುವುದು.

ಮಧುಮೇಹ, ಕ್ರಾನಿಕ್ ಅಸ್ತಮಾ, ಸಂಧಿವಾತ, ಬೊಜ್ಜುತನ, ಪಾರ್ಶ್ವವಾಯು, ಚರ್ಮರೋಗ, ಕಿಡ್ನಿ ಸ್ಟೋನ್, ಗಾಲ್ ಬ್ಲಾಡರ್ ಸ್ಟೋನ್ ಅಥವಾ ಯಾವುದೇ ಇತರ ರೋಗ ಪೀಡಿತರು ಉಚಿತ ಸಲಹೆಯನ್ನು ಪಡೆಯಬಹುದು ಎಂದು ಸಂಸ್ಥೆಯ ಸಂಸ್ಥಾಪಕ ಡಾ. ಕೆ. ಎಸ್. ಶರ್ಮಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net