

ಬೆಂಗಳೂರು: ವನ್ಯಜೀವಿ ಸಪ್ತಾಹ -2023 ಅಂಗವಾಗಿ ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (ಬಿಬಿಪಿ) ಅ.2, 7 ಹಾಗೂ 8ರಂದು ಬೆಳಿಗ್ಗೆ 6.30ರಿಂದ 9ರ ವರೆಗೆ ಉದ್ಯಾನವನದಲ್ಲಿ ಸ್ಥಳೀಯ ಜೀವವೈವಿಧ್ಯತೆಯ ದಾಖಲಾತಿ ಮತ್ತು ಛಾಯಾಗ್ರಹಣಕ್ಕಾಗಿ ಉಚಿತ ಪ್ರಕೃತಿ ನಡಿಗೆಯನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟವರು ಭಾಗವಹಿಸಬಹುದಾಗಿದ್ದು, 18 ವರ್ಷಕ್ಕಿಂತ ಒಳಗಿನ ಮಕ್ಕಳು ಕಡ್ಡಾಯವಾಗಿ ತಮ್ಮ ಪೋಷಕರೊಂದಿಗೆ ಭಾಗವಹಿಸಬಹುದು. ಒಂದು ತಂಡದಲ್ಲಿ ಒಟ್ಟು 40 ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ಹೀಗಾಗಿ ಅ.30ರ ಸಂಜೆ 5 ಗಂಟೆಯೊಳಗೆ ಮೊಬೈಲ್ ವಾಟ್ಸ್‌ಅಪ್ ಸಂಖ್ಯೆ 9035092797 ಮೂಲಕ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಭಾಗವಹಿಸಲಿಚ್ಚಿಸುವವರು ಸದರಿ ದಿನದಂದು ಬೆಳಿಗ್ಗೆ 6.30ರೊಳಗೆ ಮೃಗಾಲಯದ ಸಿಬ್ಬಂದಿ ಪ್ರವೇಶದ್ವಾರದಲ್ಲಿ ಸೇರಬೇಕು.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಮೃಗಾಲಯದಲ್ಲಿ ವನ್ಯಜೀವಿ ಸಪ್ತಾಹದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತಮ್ಮ ವನ್ಯಜೀವಿಯ ಮೂರು ಛಾಯಚಿತ್ರಗಳನ್ನು ಹಾಗೂ ಒಂದು ಚಿತ್ರಕಲೆಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಿಕೊಡಲಾಗುವುದು. ಆಸಕ್ತರು ಹಾರ್ಡ್‌ಕಾಪಿಗಳನ್ನು ಸೆ.29ರ ಒಳಗೆ ಸಾರ್ವಜನಿಕ ಸಂಪರ್ಕಾಧಿಕಾರಿಯ ಮೊಬೈಲ್ ಸಂಖ್ಯೆ - 9035092796 ಇವರಿಗೆ ತಲುಪಿಸಬಹುದಾಗಿರುತ್ತದೆ. ಉತ್ತಮವಾದ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗುವುದು. ಅ.8ರಂದು ನಿಗದಿಯಾಗಿರುವ ಸಮಾರೋಪ ಸಮಾರಂಭಕ್ಕೆ ವಿಜೇತರನ್ನು ಆಹ್ವಾನಿಸಲಾಗುವುದು ಎಂದು ಬಿಬಿಪಿ ಅಧಿಕಾರಿಗಳು ತಿಳಿಸಿದ್ದಾರೆ.