ಉಚಿತ ಪ್ರಕೃತಿ ಚಿಕಿತ್ಸೆ ಸಲಹಾ ಶಿಬಿರ

Natural Tmt New
Published on

ಹುಬ್ಬಳ್ಳಿ : ಇಲ್ಲಿನ ಗೋಕುಲ ರಸ್ತೆಯ ಡಾ. ಕೆ.ಎಸ್​. ಶರ್ಮಾ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಸಂಸ್ಥೆಯಲ್ಲಿ ಮಾ. 23ರಂದು ಮಧ್ಯಾಹ್ನ 12 ಗಂಟೆಗೆ ಉಚಿತ ಪ್ರಕೃತಿ ಚಿಕಿತ್ಸೆ ಸಲಹಾ ಶಿಬಿರವನ್ನು ಸಂಸ್ಥೆಯ ಆವರಣದಲ್ಲಿ ಏರ್ಪಡಿಸಲಾಗಿದೆ.

ಪ್ರಕೃತಿ ಚಿಕಿತ್ಸೆಯ ಮಹತ್ವದ ಕುರಿತು ತರಿಂದ ವಿಶೇಷ ಉಪನ್ಯಾಸ ನಡೆಯುವುದು. ನಂತರ ಪ್ರತಿಯೊಬ್ಬರ ಆರೋಗ್ಯ ಸಮಸ್ಯೆಗಳಿಗೆ ಉಚಿತ ಸಲಹೆ ನೀಡಲಾಗುವುದು.

ಮಧುಮೇಹ, ಕ್ರಾನಿಕ್​ ಅಸ್ತಮಾ, ಸಂಧಿವಾತ, ಬೊಜ್ಜುತನ, ಪಾರ್ಶ್ವವಾಯು, ಚರ್ಮರೋಗ, ಕಿಡ್ನಿ ಸ್ಟೋನ್​, ಗಾಲ್​ ಬ್ಲಾಡರ್​ ಸ್ಟೋನ್​ ಅಥವಾ ಯಾವುದೇ ಇತರ ರೋಗ ಪೀಡಿತರು ಉಚಿತ ಸಲಹೆ ಪಡೆಯಬಹುದು ಎಂದು ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಎಸ್​. ಶರ್ಮಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net