ಅಸ್ತಮಾ ರೋಗಿಗಳಿಗೆ ಉಚಿತ ಔಷಧ

VV DIGITAL
Published on

ಲಕ್ಷ್ಮೇಶ್ವರ: ಈ ವರ್ಷವೂ ಜೂನ್ 8ರಂದು ಮೃಗಶಿರ ಮಳೆಯ ನಕ್ಷತ್ರ ಪ್ರವೇಶ ಕಾಲ ಮಧ್ಯಾಹ್ನ 1.23ಕ್ಕೆ ಪಟ್ಟಣದ ಹಳೇ ಪೊಲೀಸ್ ಠಾಣೆಯ ಹತ್ತಿರದ ಸರ್ಕಾರಿ ಪ್ರಾಥಮಿಕ ಶಾಲೆ ನಂ.1ರಲ್ಲಿ ಔಷಧ ವಿತರಿಸಲಾಗುತ್ತಿದೆ. ಪಟ್ಟಣದಲ್ಲಿ 59 ವರ್ಷಗಳಿಂದ ಅಸ್ತಮಾ ರೋಗಿಗಳಿಗೆ ಉಚಿತ ಔಷಧ ನೀಡಲಾಗುತ್ತಿದೆ. ಆಯುರ್ವೇದ ಪಂಡಿತರಾಗಿದ್ದ ವೈದ್ಯ ಬಾಬುರಾವ ಕುಲಕರ್ಣಿ ಅವರ ನಿಧನಾ ನಂತರವೂ ಅವರ ಕುಟುಂಬ ಹಾಗೂ ಶಿಷ್ಯರು ಈ ಔಷಧವನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ಔಷಧ ಪಡೆಯಲು ಇಚ್ಛಿಸುವವರು ಅಂದು ಬೆಳಗ್ಗೆಯೇ ಹಾಜರಿರಬೇಕು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net