

ಕಾರವಾರ: ಸದಾಶಿವಗಡ ಹೈಸ್ಕೂಲ್ ನಲ್ಲಿ ಭಾನುವಾರ 315 ಜನರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲಾಯಿತು.
ಕಲ್ಲೂರ ಏಜ್ಯುಕೇಶನ್ ಟ್ರಸ್ಟ್, ಸದಾಶಿವಗಡ ಲಯನ್ಸ್ ಕ್ಲಬ್,ಕಾರವಾರ ಲಯನ್ಸ್ ಕ್ಲಬ್, ಪ್ರೇಮ ಆಶ್ರಮ ಚ್ಯಾರಿಟೇಬಲ್ ಟ್ರಸ್ಟ್ ಅಮದಳ್ಳಿ ಮರ್ಕ್ಯೂರಿ ಮರೈನ್ & ರಿಪೇರಿ ಪ್ರೈ.ಲಿ ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಮಂಗಳೂರಿನ ಶ್ರೀನಿವಾಸ ಮೆಡಿಕಲ್ ಕಾಲೇಜ್ ಮತ್ತು ಹಾಸ್ಪಿಟಲ್ ನ ಖ್ಯಾತ ಹೃದ್ರೋಗ ತಜ್ಞ ಡಾ. ಅಮಿತ ಕಿರಣ್ ಅವರ ನೇತ್ರತ್ವದಲ್ಲಿ 30 ಕ್ಕೂ ಹೆಚ್ಚು ವೈದ್ಯರು, ವಿವಿಧ ರೋಗದ ಸಂಬಂಧ ತಪಾಸಣೆ ಮಾಡಿ, ಔಷಧ, ಸಲಹೆ ನೀಡಿದರು.
ಕಾಲೇಜ್ ನ ತಜ್ಞ ವೈದ್ಯ ಡಾ..ಶಶಿರಾಜ್ ಶೆಟ್ಟಿ ಮಾತನಾಡಿ, ನಮ್ಮ ಮೆಡಿಕಲ್ ಕಾಲೇಜ್ ಸಾಮಾಜಿಕ ಭಾಗವಾಗಿ ಪ್ರತಿ ತಿಂಗಳು ಎರಡನೇ ಭಾನುವಾರ ಗ್ರಾಮೀಣ ಭಾಗಕ್ಕೆ ಹೋಗಿ ಉಚಿತ ಚಿಕಿತ್ಸೆ ನೀಡಿ ಬರುತ್ತಿದ್ದೇವೆ ಎಂದರು.
ಇದನ್ನೂ ಓದಿ: 77ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬೈಸಿಕಲ್ ರೈಡ್
ಮಾಜಿ ಶಾಸಕ ಗಂಗಾಧರ ಭಟ್, ಪತ್ರಕರ್ತ ಗಂಗಾಧರ ಹಿರೇಗುತ್ತಿ,
ಪ್ರೇಮ ಆಶ್ರಮ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಸೀತಾರಾಮ ಗಾಂವಕರ್, ಕಾರವಾರ ಲಯನ್ಸ್ ಕ್ಲಬ್ ಅಧ್ಯಕ್ಷ .ಗಜಾನನ ಆಳ್ವಾ, ಸದಾಶಿವಗಡ ಹೈಸ್ಕೂಕ್ ಮುಖ್ಯಾಧ್ಯಾಪಕ ಯು.ಬಿ.ಮುತಗೇರಿ, ವೇದಿಕೆಯ ಮೇಲಿದ್ದರು. ಕಲ್ಲೂರು ಎಜುಕೇಶನ್ ಟ್ರಸ್ಟ್ ನ ಇಬ್ರಾಹಿಂ ಕಲ್ಲೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸದಾಶಿವಗಡಲಯನ್ಸ್ ಕ್ಲಬ್ ಅಧ್ಯಕ್ಷ ಬಿಷ್ಠಣ್ಣನವರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಸದಸ್ಯರಾದ ಮಂಜುನಾಥ ಪವಾರ, ಪ್ರಜೀತ.ಪಿ.ವಿ.ರಾಮಚಂದ್ರ ಅಂದ್ಲಮನೆ,ದಿನೇಶ ಗಾಂವಕರ, ತಬಸಮ್ ಮುಖಾದಮ್, ರೋಶನ್ ರೇವಣಕರ, ಜೆ.ಬಿ.ತಿಪ್ಪೇಸ್ವಾಮಿ, .ಸುನೀಲ್ ಐಗಳ ಇತರರು ಇದ್ದರು.
.