ಉಚಿತ ವೈದ್ಯಕೀಯ ಶಿಬಿರ ಜೂನ್ 4ರಂದು

Published on

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳ ವಧರ್ಂತಿ ಉತ್ಸವ ನಿಮಿತ್ತ ಜೂನ್ 4ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಗ್ರಾಮಾಭ್ಯುದಯ ಸಂಸ್ಥೆಯ ಸಹಕಾರದಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ, ಔಷಧ ವಿತರಣೆ, ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಅಂದು ಮುಂಜಾನೆ ಸಹಸ್ರಾವರ್ತನ ಅಥರ್ವಶೀರ್ಷ ಪಾರಾಯಣ ಹಾಗೂ ಹವನ, ನಾಲ್ಕು ಕಾಯಿ ಮಹಾಗಣಪತಿ ಹವನ, ಶ್ರೀಸೂಕ್ತ, ಮೊದಲಾದ ವೈದಿಕ ಕಾರ್ಯಕ್ರಮಗಳು ನಡೆಯಲಿವೆ.

ಟಿಎಸ್ ಎಸ್ ಆಸ್ಪತ್ರೆ, ಪಂಡಿತ್ ಆಸ್ಪತ್ರೆ ರಕ್ತ ನಿಧಿ ಘಟಕ, ಸೋಂದಾ ಸೊಸೈಟಿ, ತಾಲೂಕು ಆರೋಗ್ಯ ಇಲಾಖೆ, ಶ್ರೀಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನ, ಜಾಗೃತ ವೇದಿಕೆ, ಹುಲೇಕಲ್ ಶ್ರೀದೇವಿ ಶಿಕ್ಷಣ ಸಂಸ್ಥೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹುಲೇಕಲ್, ಗೋಳಿಕೊಪ್ಪ ಸಹೋದರರ ಸಹಕಾರದಲ್ಲಿ ಗ್ರಾಮಾಭ್ಯುದಯ ವೈದ್ಯಕೀಯ ಶಿಬಿರ ಸಂಯೋಜಿಸಿದೆ.

ವೈದ್ಯರಾದ ಡಾ. ಸುಮನ್ ಹೆಗಡೆ, ಡಾ.ಪಿ.ಎಸ್. ಹೆಗಡೆ, ಡಾ. ಮಧುಕರ ಪಾಟೀಲ, ಡಾ. ಸ್ವಾತಿ ನಾಡಿಗೇರ ಭಾಗವಹಿಸುವವರು. ಮಠದ ಸುಧರ್ಮಾ ಸಭಾಂಗಣದಲ್ಲಿ ಬೆಳಗ್ಗೆ 10ರಿಂದ 1:30ರ ತನಕ ಶಿಬಿರ ಆಯೋಜಿತವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net