ನಾಳೆ ನೀರ್ಚಾಲಿನಲ್ಲಿ ವೈದ್ಯಕೀಯ ಶಿಬಿರ

medical camp 12
Published on

ಕಾಸರಗೋಡು: ಸೂಪರ್ ಸ್ಪೆಷಾಲಿಟಿ ಉಚಿತ ವೈದ್ಯಕೀಯ ಶಿಬಿರ ಮಾ.8ರಂದು ಬೆಳಗ್ಗೆ 10ರಿಂದ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಲಿರುವುದು. ಬೆಳಗ್ಗೆ 9ರಿಂದ 11.30ರ ವರೆಗೆ ನೋಂಣಿ ನಡೆಯಲಿದೆ.

ಐಸಿಸಿ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ನೀರ್ಚಾಲ್, ಯಂಗ್ ಫ್ರೆಂಡ್ಸ್ ನೀರ್ಚಾಲ್ ಹಾಗೂ ಮಂಗಳೂರಿನ ಕೆಎಂಸಿ ಅತ್ತಾವರ ಸಹಯೋಗದೊಂದಿಗೆ ಶಿಬಿರ ನಡೆಯಲಿರುವುದು. ಇಎನ್‌ಟಿ, ಜನರಲ್, ಬೆನ್ನುಮೂಳೆ, ಕಣ್ಣಿನ ತಪಾಸಣೆ, ಮಕ್ಕಳ ವಿಭಾಗ, ಕಿಡ್ನಿ ಮತ್ತು ಮೂತ್ರ ರೋಗದ ಬಗ್ಗೆ ತಜ್ಞ ವೈದ್ಯರಿಂದ ತಪಾಸಣೆ ನಡೆಯುವುದು. ಇಸಿಜಿ, ರಕ್ತ ತಪಾಸಣೆ, ಉಚಿತ ಔಷಧ ವಿತರಣೆ ನಡೆಯುವುದು. 35 ಸಾವಿರ ರೂ.ವರೆಗೆ ಆರೋಗ್ಯ ವಿಮಾ ಲಭ್ಯತೆಗಾಗಿರುವ ಕೆಎಂಸಿ ಲಾಯಲ್ಟಿ ಕಾರ್ಡು ಒದಗಿಸಲು ನೋಂದಣಿ ಶಿಬಿರ ನಡೆಯುವುದು. ಒಂದು ಕುಟುಂಬದ ಐದು ಮಂದಿ ವರೆಗೆ ನೋಂದಣಿಗೆ 400ರೂ. ಶುಲ್ಕವಿದ್ದು, ಕುಟುಂಬದ ರೇಶನ್ ಕಾರ್ಡಿನ ಜೆರಾಕ್ಸ್ ಪ್ರತಿ ಅಥವಾ ಆಧಾರ್ ಕಾರ್ಡು ಪ್ರತಿ ಒದಗಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net